ಪೊನ್ನಂಪೇಟೆ: ಮುಗುಟಗೇರಿಯಲ್ಲಿ ಮುಖ್ಯರಸ್ತೆಗೆ ಅಡ್ಡಲಾಗಿ ಬಿದ್ದ ಮರ!

ಪೊನ್ನಂಪೇಟೆ: ಮುಗುಟಗೇರಿಯಲ್ಲಿ  ಮುಖ್ಯರಸ್ತೆಗೆ ಅಡ್ಡಲಾಗಿ ಬಿದ್ದ ಮರ!
ಪೊನ್ನಂಪೇಟೆ: ಮುಗುಟಗೇರಿಯಲ್ಲಿ  ಮುಖ್ಯರಸ್ತೆಗೆ ಅಡ್ಡಲಾಗಿ ಬಿದ್ದ ಮರ!

ಪೊನ್ನಂಪೇಟೆ : ಗಾಳಿ, ಮಳೆಗೆ ಪೊನ್ನಂಪೇಟೆಯಿಂದ ಕಾನೂರಿಗೆ ತೆರಳುವ ಮುಗುಟಗೇರಿ ಗ್ರಾಮದ ಮುಖ್ಯರಸ್ತೆಗೆ ಅಡ್ಡಲಾಗಿ ಭಾರಿ ಗಾತ್ರದ ಮರ ಬಿದ್ದು, ಎರಡು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ವಾಹನಗಳ ಸಂಚಾರಕ್ಕೆ ತಡೆಯುಂಟಾಯಿತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಚೆಸ್ಕಾಂ ಇಲಾಖಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯುತ್ ಹರಿವು ಸ್ಥಗಿತಗೊಳಿಸುವಂತೆ ತಿಳಿಸಿ, ಬಳಿಕ ರಸ್ತೆಗೆ ಉರುಳಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭ ಮಾತನಾಡಿದ ಸ್ಥಳೀಯರಾದ ಐನಂಡ ಬೋಪಣ್ಣ ಅವರು, ಕಾನೂರು ಜಂಕ್ಷನ್ ಬಳಿ ನೂತನವಾಗಿ ಅಳವಡಿಸಿದ್ದ ವಿದ್ಯುತ್ ಕಂಬಗಳ ಮೇಲೆ ಮರ ಧರೆಗುರುಳಿದೆ. ಸ್ಥಳೀಯರೆಲ್ಲ ಸೇರಿ ಇದನ್ನು ತೆರವುಗೊಳಿಸಿದ್ದಾರೆ. ಮುಂದಾಗುವ ಅಪಾಯವನ್ನು ತಪ್ಪಿಸಲು ಚೆಸ್ಕಾಂ ಇಲಾಖೆಯವರು ಕಂಬವನ್ನು ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭ ಅಜ್ಜಿಕುಟ್ಟೀರ ಸೋಮಯ್ಯ, ಅಲೆಮಾಡ ರೋಷನ್ ಹಾಗೂ ಗ್ರಾಮಸ್ಥರು ಇದ್ದರು. 

ವರದಿ:ಚಂಪಾ ಗಗನ, ಪೊನ್ನಂಪೇಟೆ.