ಬದ್ರಿಯಾ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮೊಹಮ್ಮದ್ ರಫೀಕ್ ಆಯ್ಕೆ

ಬದ್ರಿಯಾ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮೊಹಮ್ಮದ್ ರಫೀಕ್ ಆಯ್ಕೆ
ಬದ್ರಿಯಾ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮೊಹಮ್ಮದ್ ರಫೀಕ್ ಆಯ್ಕೆ

ವಿರಾಜಪೇಟೆ :- ವಿರಾಜಪೇಟೆಯ ಬದ್ರಿಯಾ ಜುಮಾ ಮಸೀದಿ ಹಾಗೂ ನಸುರತ್ತುಲ್ ಇಸ್ಲಾಂ ಮದರಸ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ ಎಸ್ ಮೊಹಮ್ಮದ್ ರಫೀಕ್ (ಕೋಳುಮಂಡ ) ಆಯ್ಕೆಯಾಗಿದ್ದಾರೆ .ನಸುರತ್ತುಲ್ ಮದರಸ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025- 26 ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ ಎಸ್ ಮೊಹಮ್ಮದ್ ರಫೀಕ್, ಕಾರ್ಯದರ್ಶಿಯಾಗಿ ಸಿಎಚ್ ಮಹಮ್ಮದ್, ಸಹಕಾರ್ಯದರ್ಶಿಯಾಗಿ ಪಿ ಎಂ ಇಸ್ಮಾಯಿಲ್, ಸದಸ್ಯರುಗಳಾಗಿ ಕೆ.ಎಂ ಆಶಿಕ್, ಹಸೈನರ್,ಪಿಎಂ ರಶೀದ್ ,ಕೆ.ಕೆ ಶಫೀಕ್, ಕೆ ಎ ಫೈಝಲ್, ಪಿ ಎಸ್ ಸೈಫುದ್ದೀನ್ ಸೇರಿದಂತೆ ಮತ್ತಿತರರು ಅವಿರೋಧವಾಗಿ ಆಯ್ಕೆಯಾದರು. ಕೆ.ಎ ನೌಶಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖಾತಿಬ್ ಹಮೀದ್ ಸಖಾಫಿ ಉಸ್ತಾದ್ ಪ್ರಾರ್ಥನೆ ನೇರವೆಸಿದರು.