ಬೆಟ್ಟಗೇರಿ:ಗಾಳಿ- ಮಳೆ ರಸ್ತೆಗೆ ಬಿದ್ದಮರ,ಸಂಚಾರಕ್ಕೆ ತೊಡಕು

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಬೆಟ್ಟಗೇರಿಯಿಂದ ಮಡಿಕೇರಿ ಕಡೆಗೆ ತೆರಳುವ ಮುಖ್ಯ ರಸ್ತೆಯ ಬೆಟ್ಟಗೇರಿ ಸರ್ಕಾರಿ ಶಾಲೆ ಬಳಿಯಲ್ಲಿ ಭಾನುವಾರ ಮುಂಜಾನೆ ಸುರಿದ ಗಾಳಿ ಮಳೆಗೆ ಮರ ರಸ್ತೆಗೆ ಅಡ್ಡಲಾಗಿ ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದು ಇದರಿಂದ ವಿದ್ಯುತ್ ಕಂಬಕ್ಕೆ ಹನಿಯಾಗಿದೆ. ರಸ್ತೆಗೆ ಅಡ್ಡಲಾಗಿ ಮರ ಮತ್ತು ವಿದ್ಯುತ್ ಕಂಬ ಬಿದ್ದಪರಿಣಾಮ ವಾಹನಗಳ ಸಂಚಾರಕ್ಕೆ ಕೆಲಕಾಲ ತೊಡಕುಂಟಾಗಿತ್ತು. ಸಾರ್ವಜನಿಕರು ಹಾಗೂ ಸೆಸ್ಕ್ ಇಲಾಖೆಯ ಸಿಬ್ಬಂದಿಗಳು ರಸ್ತೆಗೆ ಬಿದ್ದ ಮರ ಮತ್ತು ವಿದ್ಯುತ್ ಕಂಬವನ್ನು ತೆರವು ಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.