ಬ್ಯಾಡಗೊಟ್ಟದಲ್ಲಿ ರಕ್ತದಾನ ಶಿಬಿರ

ಕೊಡ್ಲಿಪೇಟೆ :ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಬ್ಯಾಡಗೊಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕೊಡಗು ವ್ಯೆದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿದಿ ವಿಭಾಗದ ವ್ಯೆದ್ಯರುಗಳಾದ ಡಾ.ಸಾದನ್ಯ ಮತ್ತು ಡಾ ಸಾನ್ಯ ,ಸ್ಥಳೀಯ ಸಮುದಾಯ ಆರೋಗ್ಯ ಅಧಿಕಾರಿ ಧರಣೇಶ್ ರಾಜ್ ರಕ್ತದಾನದದ ಮಹತ್ವದ ಕುರಿತು ಮಾತನಾಡಿದರು.
ಈ ಸಂದರ್ಭದ ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದ್ರಾಕ್ಷಾಯಿಣಿ ,ಸದಸ್ಯರುಗಳಾದ ಹನೀಫ್ ,ಪಾವನ ,ಪಿಡಿಯೋ ಗಿರೀಶ್ ,ಆಶಾ ಕಾರ್ಯಕರ್ತೆಯರಾದ ಶಾಹಿದಾ ,ಚೆನ್ನಾಜಿ ,ಶಿಕ್ಷಕಿ ರಿಜ್ವಾನಭಾನು, ಹಾಗೂ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ಇದ್ದರು.ಶನಿವಾರಸಂತೆ ಪೋಲಿಸ್ ಠಾಣೆಯ ಪೇದೆಗಳಾದ ಹರ್ಷ ,ರಂಜಿತ್, ಅನಿಲ್ ,ಶಿವಶಂಕರ್,ಅಂಚೆ ಇಲಾಖೆ ನೌಕರರಾದ ನಾಗನಗೌಡ,ಕಲ್ಯಾಣಿ ,ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನಿಸಾರ್ ,ಗ್ರಾಮ ಪಂಚಾಯತ್ ನೌಕರ ಸಚಿನ್ ಮುಂತಾದ ಪ್ರಮುಖರು ರಕ್ತದಾನ ಮಾಡಿ ಮಾದರಿಯಾದರು.