ಮರ ಕಪಾತ್ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವು: ನೆಲ್ಲಿಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಘಟನೆ

ಮರ ಕಪಾತ್ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವು:  ನೆಲ್ಲಿಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಘಟನೆ

ಸಿದ್ದಾಪುರ:ಮರ ಕಪಾತ್ ಮಾಡುವ ವೇಳೆಯಲ್ಲಿ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡುವಿನಲ್ಲಿ ಶುಕ್ರವಾರ ನಡೆದಿದೆ.ಬೆಟ್ಟದಕಾಡು ತೋಟದಲ್ಲಿ ಮರ ಕಪಾತ್ ಮಾಡುತ್ತಿದ್ದ ಪಿರಿಯಾಪಟ್ಟಣ ಮೂಲದ ಮರಳುಗಟ್ಟೆ ಹಾಡಿ,ಮುತ್ತೂರು ಕಾಲೋನಿ ನಿವಾಸಿ ದಿನೇಶ್ ಮರದಿಂದ ಬಿದ್ದು ಸಾವನ್ನಪ್ಪಿರುವ ವ್ಯಕ್ತಿ.ಮರದಿಂದ ಬಿದ್ದ ವೇಳೆಯಲ್ಲಿ ಅಲ್ಲಿಯೇ ದಿನೇಶ್ ಸಾವನ್ನಪ್ಪಿದ್ದಾನೆ.ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಗಾರಕ್ಕೆ ದಿನೇಶ್ ಅವರ ಮೃತದೇಹವನ್ನು ಮರೋಣತ್ತರ ಪರೀಕ್ಷೆ ರವಾನಿಸಲಾಗಿದೆ.ಮೃತ ದಿನೇಶ್ ಎರಡು ಮಕ್ಕಳನ್ನ ಅಗಲಿದ್ದಾರೆ.