ಮರ ಸಾಗಾಟ ನಿರ್ಬಂಧ: ಸಮಯಾವಕಾಶ ನೀಡುವಂತೆ ಜಿಲ್ಲಾಧಿಕಾರಿ ಗೆ ಮನವಿ

ಮರ ಸಾಗಾಟ ನಿರ್ಬಂಧ: ಸಮಯಾವಕಾಶ ನೀಡುವಂತೆ ಜಿಲ್ಲಾಧಿಕಾರಿ ಗೆ ಮನವಿ

ಸಿದ್ದಾಪುರ: ಮರಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿಯವರು ಆದೇಶಿಸಿರುವ ಷರತ್ತಿಗೆ ಸಮಯಾವಕಾಶವನ್ನು ಕೊಡುವ ಬಗ್ಗೆ ಕೊಡಗು ಜಿಲ್ಲೆಯ ಮರದ ವ್ಯಾಪಾರಿಗಳು ಹಾಗೂ ಕಾರ್ಮಿಕರು ಜಿಲ್ಲಾಧಿಕಾರಿ ಗೆಮನವಿ ನೀಡಿದ್ದಾರೆ.ಜೂನ್ 6 ರಿಂದ ಜುಲೈ 5 ರವರೆಗೆ ಎಲ್ಲಾ ರೀತಿಯ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಇದರಿಂದಾಗಿ 

ಮರದ ವ್ಯಾಪಾರಿಗಳು ಹಾಗೂ ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹಾಗೂ ಮರದ ವ್ಯಾಪಾರಿಗಳು ತೋಟದಲ್ಲಿ ಕಡಿದು ಮರಗಳು ಮೃದು ಆಗಿದ್ದು ಕೂಡಲೇ ಸಾಗಿಸದಿದ್ದಲ್ಲಿ ಉಪಯೋಗಕ್ಕೆ ಬರುವುದಿಲ್ಲ, ಇದರಿಂದ ವ್ಯಾಪಾರಿಗಳಿಗೆ  ತುಂಬಾ ನಷ್ಟ ಉಂಟಾಗಲಿದೆ ಕಡಿದ ಮರದ ನಾಟಗಳನ್ನು ಸಾಗಿಸಲು ಮುಂದಿನ 20-06-2025 ರವರೆಗೆ ಸಮಯಾವಕಾಶವನ್ನು ನೀಡಬೇಕೆಂದು ಮನವಿ ನೀಡಲಾಯಿತು.ಇದೆ ಸಂದರ್ಭ ಸಂಘದ ಅಧ್ಯಕ್ಷ  ಸಮೀರ್, ಕಾರ್ಯದರ್ಶಿ ಹುರೈಸ್, ಸದಸ್ಯರಾದ ಮಹಮ್ಮದ್,ಹಂಸ,ಆಸೀಫ್, ಮುಸ್ತಫಾ, ಮುಂತಾದವರು ಹಾಜರಿದ್ದರು.