ಮರಂದೋಡ ಶ್ರೀ ಭಗವತಿ ದೇವಾಲಯ ರಸ್ತೆ ಉದ್ಘಾಟಿಸಿದ ಶಾಸಕ ಎ. ಎಸ್. ಪೊನ್ನಣ್ಣ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು : ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡ ಗ್ರಾಮದ ಕೇಕುಮಾನಿ ಶ್ರೀ ಭಗವತಿ ದೇವಾಲಯಕ್ಕೆ ತೆರಳುವ 8ಲಕ್ಷ ರೂ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾದ ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು.
ಬಳಿಕ ಕೇಕುಮಾನಿ ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿದ ಶಾಸಕರು ಕ್ಷೇತ್ರದ ಅಭಿವೃದ್ಧಿ,ಸುರಕ್ಷತೆ ಹಾಗೂ ಈ ಬಾರಿಯ ಮಳೆಗಾಲವು ಸುಸೂತ್ರವಾಗಿ ಯಾವುದೇ ಹಾನಿ ಉಂಟುಮಾಡದೆ ಜನರ ಬಾಳಿಗೆ ಸುಖ,ಶಾಂತಿಯನ್ನು ನೀಡಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಕಕ್ಕಬ್ಬೆ ವಲಯ ಕಾಂಗ್ರೆಸ್ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಪಂಚಾಯತ್ ಸದಸ್ಯ ಹರೀಶ್ ಮೊಣ್ಣಪ್ಪ,ಪ್ರಮುಖರಾದ ಚೋಯಮಾಡಂಡ ಪೂಣಚ್ಚ,ಅನ್ನಡಿಯಂಡ ದೀಪಕ್,ಚೋಯಮಾಡಂಡ ವಿಜು, ಮುಕ್ಕಾಟಿ ಚಿದಾ, ಮಾರ್ಚಂಡ ಪ್ರವೀಣ್ ಸೇರಿದಂತೆ ಪಕ್ಷದ ಪ್ರಮುಖರು ಗ್ರಾಮಸ್ಥರು,ಮತ್ತಿತರರು ಹಾಜರಿದ್ದರು.
