ಮಳೆಯ ಆರ್ಭಟ: ಎಡಪಾಲ - ಕಡಂಗ ರಸ್ತೆಯ ತೋತೆಕಂಡಿ ಸೇತುವೆ ಮೇಲೆ ಮುಳಗಡೆ

ನಾಪೋಕ್ಲು : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ವಿರಾಜಪೇಟೆಯಿಂದ ಕಡಂಗ, ಎಡಪಾಲ, ಮಾರ್ಗವಾಗಿ ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಎಡಪಾಲ ಗ್ರಾಮದ ಬಳಿಯ ತೂತೆಕಂಡಿ ಸೇತುವೆ ಮೇಲೆ ಪ್ರವಾಹ ಬಂದು ಸಂಚಾರ ಸ್ಥಗಿತಗೊಂಡಿದೆ.ಭಾನುವಾರ ಈ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ತೋತೆಕಂಡಿ ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತ ಗೊಂಡಿದೆ.