ಮಾದಕವಸ್ತುಗಳ ವಿರುದ್ಧ ಜನಜಾಗೃತಿ: ಸಮಸ್ತ ಮದರಸ ಅಧ್ಯಾಪಕರಿಂದ ಪ್ರತಿಜ್ಞಾ ವಿಧಿ ಸ್ವೀಕಾರ
ಮಡಿಕೇರಿ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ನಿರ್ದೇಶದ ಮೇರೆಗೆ ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ವಿರಾಜಪೇಟೆ ಸಮೀಪದ ಕಲ್ಲುಬಾಣೆಯ ದಾರುಲ್ ಇಸ್ಲಾಂ ಮದರಸದಲ್ಲಿ ಜಿಲ್ಲೆಯ ಸಮಸ್ತ ಮದರಸಗಳ ಮುಖ್ಯೋಪಾಧ್ಯಾಯರು ಹಾಗೂ ಮದರಸಾ ಅಧ್ಯಾಪಕರ ಸಂಗಮ ನಡೆಯಿತು.ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳು ಕುರಿತು ಚರ್ಚಿಸಲಾಯಿತು.
ಮಾದಕ ಮುಕ್ತ ಸಮಾಜವನ್ನು ಸಮಾಜ ನಿರ್ಮಿಸಲು ಜಿಲ್ಲೆಯ ಮದರಸ ಅಧ್ಯಾಪಕರು ಪ್ರತಿಜ್ಞೆಯನ್ನು ಸ್ವೀಕರಿಸಿದರು. ಮುಂದಿನ ಭಾಗವಾಗಿ ಸಮಸ್ತದ ಮದರಸದಲ್ಲಿ ಕಲಿಯುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಮಾದಕ ಮುಕ್ತ ಸಮಾಜಕ್ಕಾಗಿ ಮದ್ರಸ ವಿದ್ಯಾರ್ಥಿಗಳ ಸಹಿ ಶೇಖರಣೆಯ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿಯನ್ನು ನೀಡಲಾಗುತ್ತದೆ.ಜನ ಜಾಗೃತಿ ಸಭೆ ಮಾದಕವಸ್ತುಗಳ ದುಷ್ಪರಿಣಾಮಗಳ ಚಿತ್ರೀಕರಣಗಳು, ಹಾಗೂ ಅಪಘಾತಗಳ ಕುರಿತು ಕಾರ್ಯಗಾರಗಳು ನಡೆಯಲಿದೆ. ಜಿಲ್ಲೆಯ ಜನತೆ ,ಆಡಳಿತ ಮಂಡಳಿ ಹಾಗೂ ಮದರಸ ಅಧ್ಯಾಪಕರು ಮತ್ತು ಪೋಷಕರೊಂದಿಗೆ ಸಹಕರಿಸಬೇಕಾಗಿ ಪ್ರತಿಜ್ಞೆಯನ್ನಾ ವಿಧಿಯನ್ನು ಬೋಧಿಸಿದ,ಕೊಡಗು ಜಿಲ್ಲಾ ಜಂಇಯ್ಯತುಲ್ ಮೊಹಲ್ಲಿಮೀನ್ ಕೋಶಾಧಿಕಾರಿ ಎಂ. ತಮ್ಲೀಖ್ ದಾರಿಮಿ ಮನವಿ ಮಾಡಿದ್ದಾರೆ.