ಮೇ 18ರಂದು ಸಿದ್ದಾಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಿದ್ದಾಪುರ: ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ( ಎಸ್.ಎನ್ .ಡಿ.ಪಿ.) ಹಾಗೂ ಕೆ.ವಿ.ಜಿ ವೈಯಕ್ತಿಕ ಮತ್ತು ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಮೇ 18ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವುದಾಗಿ ಎಸ್.ಎನ್ .ಡಿ.ಪಿ.ಜಿಲ್ಲಾ ಅಧ್ಯಕ್ಷ ವಿ.ಕೆ.ಲೋಕೇಶ್ ಮಾಹಿತಿ ನೀಡಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕಣ್ಣು,ಕಿವಿ,ಗಂಟಲು ,ಸ್ತ್ರೀ ರೋಗ,ಚರ್ಮ, ಲೈಂಗಿಕ ರೋಗ,ಮಕ್ಕಳ ವಿಭಾಗ ,ಎಲುಂಬು,ಕೀಲು, ದಂತ ಸೇರಿದಂತೆ ,ಜನರಲ್ ಮೆಡಿಸಿನ್ ವಿಭಾಗದ ನುರಿತ ವೈದ್ಯರಿಂದ ಪರೀಕ್ಷೆ ಮತ್ತು ಉಚಿತ ಔಷಧಿ ವಿತರಣೆ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9.30ಕ್ಕೆ ಮಾಜಿ.ಶಾಸಕರಾದ ಕೆ.ಜಿ.ಬೋಪಯ್ಯ.ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಡಾ.ಕೆ.ವಿ.ಚಿದಾನಂದ. ನಿರ್ದೇಶಕರು ಕೆ.ವಿ.ಜಿ.ವೈದ್ಯಕೀಯ ಮಹಾ ವಿದ್ಯಾಲಯ .ಸುಳ್ಯ.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ , ಡಾ.ಉದಯಕುಮಾರ್, ರಿಶಾ ಸುರೇಂದ್ರ, ರಾಜನ್,ಕೆ.ವಿ, ಪ್ರೇಮಾನಂದ ಹಾಜರಿರುವರು.