ವಿರಾಜಪೇಟೆ: ನೆಹರು ನಗರದಲ್ಲಿ ಭಾರಿ ಗಾತ್ರದ ಮರ ರಸ್ತೆಗೆ: ವಿದ್ಯುತ್ ವ್ಯತ್ಯಯ

ವಿರಾಜಪೇಟೆ:ಪೂರ್ವ ಮುಂಗಾರು ಮಳೆ ಪರಿಣಾಮ ಭಾರಿ ಗಾತ್ರದ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ವಿರಾಜಪೇಟೆ ನೆಹರು ನಗರದಲ್ಲಿ ನಡೆದಿದೆ.ವಿರಾಜಪೇಟೆ ನಗರದ ನೆಹರು ನಗರದ ನಿವಾಸಿ ಮೂಸ ಎಂಬುವವರ ಮನೆಗೆ ತೆರಳುವ ಮಾರ್ಗದಲ್ಲಿ ಬೃಹತ್ ಗಾತ್ರದ ಮರ ಒಂದು ಅಡ್ಡಲಾಗಿ ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಗೊಳಿಸುತಿದ್ದ ವಿದ್ಯುತ್ ತಂತಿ ಕಂಬಗಳು ತುಂಡಾಗಿವೆ. ಸ್ಥಳಕ್ಕೆ ವಿರಾಜಪೇಟೆ ನಗರದ ರೆಸ್ಕ್ಯೂ ತಂಡದ ಧಾವಿಸಿ ಇದೀಗ ಮರ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.ಸ್ಥಳಕ್ಕೆ ಚೆಸ್ಕಾಂ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ವರದಿ:ಕಿಶೋರ್ ಕುಮಾರ್ ಶೆಟ್ಟಿ