ವಿರಾಜಪೇಟೆ ಸ್ವದೇಶಿ ರೇಂಜ್ ಸಮಿತಿ ಅಸ್ತಿತ್ವಕ್ಕೆ:ಅಧ್ಯಕ್ಷರಾಗಿ ಮಾಹಿನ್ ದಾರಿಮಿ ಆಯ್ಕೆ

ಮಡಿಕೇರಿ:ವಿರಾಜಪೇಟೆ ಸ್ವದೇಶಿ ರೇಂಜ್ ವತಿಯಿಂದ ಸಯ್ಯಿದ್ ಅಬ್ದುಲ್ ರಹ್ಮಾನ್ ಬಾಫಕಿ ತಂಙಲ್ ಹಾಗೂ ಶೈಖುನಾ ಮಾನಿಯೂರ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮವು ವಿರಾಜಪೇಟೆ ನುಸ್ರತುಲ್ ಉಲೂಮ್ ಮದರಸ ಆವರಣದಲ್ಲಿ ನಡೆಯಿತು.ಅಬ್ದುಲ್ ಮುಸ್ಲಿಯಾರ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತ್ತು.ವೀರಾಜಪೇಟೆ ರೇಂಜ್ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಫೈಝಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಎಲ್ಲಾ ಮುಅಲ್ಲಿಂ ಅಧ್ಯಾಪಕರು ಸ್ವದೇಶಿ ರೇಂಜ್ ಇದರ ಸದುಪಯೋಗ ಪಡೆದುಕೊಳ್ಳಬೇಕು ಕರೆ ನೀಡಿದರು.
ಅನುಸ್ಮರಣೆ ಭಾಷಣ ಮಾಡಿದ ಮುಹಮ್ಮದ್ ಅಲಿ ಬಾಖವಿ ಕಣ್ಣೂರು,ಬಾಫಕಿ ತಂಙಲ್ ಅವರ ಚರಿತ್ರೆ ಹಾಗೂ ಸಮಸ್ತಕ್ಕೆ ನೀಡಿದ ಕೊಡುಗೆ ವಿವರಿಸಿದರು .ಸಭೆಯ ಅಧ್ಯಕ್ಷತೆಯನ್ನು ಸೂಫಿ ದಾರಿಮಿ ವಹಿಸಿದ್ದರು.ಕಾರ್ಯದರ್ಶಿ ಜಲೀಲ್ ದಾರಿಮಿ ಸ್ವಾಗತ ಕೋರಿದರು.
ವಿರಾಜಪೇಟೆ ಸ್ವದೇಶಿ ರೇಂಜ್ ನೂತನ ಕಮಿಟಿ ಅಸ್ತಿತ್ವಕ್ಕೆ:
ಅಧ್ಯಕ್ಷರಾಗಿ ಮಾಹಿನ್ ದಾರಿಮಿ,ಉಪಾಧ್ಯಕ್ಷರಾಗಿ ಜೈನುದ್ದೀನ್ ಮುಸ್ಲಿಯಾರ್,ಕಾರ್ಯದರ್ಶಿಯಾಗಿ ಜಲೀಲ್ ದಾರಿಮಿ,ಸಹ ಕಾರ್ಯದರ್ಶಿಗಳಾಗಿ ಅಸ್ಲಮ್ ಫೈಝಿ, ಸಹದ್ ಫೈಝಿ,ಖಜಾಂಜಿಯಾಗಿ ಸೂಫಿ ದಾರಿಮಿ ಆಯ್ಕೆಯಾಗಿದ್ದಾರೆ.