ವಿರಾಜಪೇಟೆ:ಅನ್ವಾರುಲ್ ಹುದಾ ಶಾಲೆಯಲ್ಲಿ "ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ"

ವಿರಾಜಪೇಟೆ:ಅನ್ವಾರುಲ್ ಹುದಾ ಶಾಲೆಯಲ್ಲಿ "ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ"

ವಿರಾಜಪೇಟೆ:ಅನ್ವಾರುಲ್ ಹುದಾ ಶಾಲೆಯ 2025–26ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಅನ್ವಾರುಲ್ ಹುದಾ ವಿದ್ಯಾಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಗಳಾದ ಶೈಖುನಾ ಅಶ್ರಫ್ ಅಹ್ಸಾನಿ ಉಸ್ತಾದರು ಶಾಲೆಯ ಪ್ರಾರಂಭೋತ್ಸವದ, ಉದ್ಘಾಟನೆಯನ್ನು ನೆರವೇರಿಸಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನುವಿವರಿಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಇಲ್ಯಾಸ್ ಅನ್ವಾರಿ ಎಂ.ಎಂ., ಶಿಕ್ಷಕರಾದ ಯಾಕೂಬ್ ರಿಜ್ವಿ, ಅಹ್ಮದ್ ಮದನಿ, ಶಿಹಾಬ್ ಅನ್ವಾರಿ ಹಾಗೂ ಮುಬಾಶಿರ್ ಅಝ್ಹರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಹ್ಮದ್ ಮದನಿ ಸ್ವಾಗತ ಭಾಷಣ ಮಾಡಿ, ಶಿಹಾಬ್ ಅನ್ವಾರಿ ವಂದಿಸಿದರು.ವಿದ್ಯಾರ್ಥಿಗಳನ್ನು ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಂಡು, ಮಕ್ಕಳಿಗೆ ಸಿಹಿ ಹಂಚಲಾಯಿತು.