ಸಮಸ್ತಕೇಂದ್ರಿಯ ಜಂಇಯ್ಯತುಲ್ ಮುಅಲ್ಲಿಮೀನ್ ಕೊಡಗು ಜಿಲ್ಲಾಧ್ಯಕ್ಷರಾಗಿ ಅಬ್ದುರಹ್ಮಾನ್ ಮುಸ್ಲಿಯಾರ್ ಆಯ್ಕೆ

ಸಮಸ್ತಕೇಂದ್ರಿಯ ಜಂಇಯ್ಯತುಲ್ ಮುಅಲ್ಲಿಮೀನ್ ಕೊಡಗು ಜಿಲ್ಲಾಧ್ಯಕ್ಷರಾಗಿ ಅಬ್ದುರಹ್ಮಾನ್ ಮುಸ್ಲಿಯಾರ್ ಆಯ್ಕೆ
ಸಮಸ್ತಕೇಂದ್ರಿಯ ಜಂಇಯ್ಯತುಲ್ ಮುಅಲ್ಲಿಮೀನ್ ಕೊಡಗು ಜಿಲ್ಲಾಧ್ಯಕ್ಷರಾಗಿ ಅಬ್ದುರಹ್ಮಾನ್ ಮುಸ್ಲಿಯಾರ್ ಆಯ್ಕೆ
ಸಮಸ್ತಕೇಂದ್ರಿಯ ಜಂಇಯ್ಯತುಲ್ ಮುಅಲ್ಲಿಮೀನ್ ಕೊಡಗು ಜಿಲ್ಲಾಧ್ಯಕ್ಷರಾಗಿ ಅಬ್ದುರಹ್ಮಾನ್ ಮುಸ್ಲಿಯಾರ್ ಆಯ್ಕೆ

ಸಿದ್ದಾಪುರ: ಸಮಸ್ತ ಕೇಂದ್ರಿಯ ಜಂಇಯ್ಯತುಲ್ ಮುಅಲ್ಲಿಮೀನ್, ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯು ಕಲ್ಲುಬಾಣೆ ದಾರುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.ಎಂ.ಅಬ್ದುರಹ್ಮಾನ್ ಮುಸ್ಲಿಯಾರ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ವಾರ್ಷಿಕ ಮಹಾ ಸಭೆಯು ಪಿ.ಬಿ. ಇಸ್ಮಾಯಿಲ್ ಮುಸ್ಲಿಯಾರ್ ಉದ್ಘಾಟಿಸಿದರು.ಪ್ರಧಾನ ಕಾರ್ಯದರ್ಶಿ ಎಂ ಆರಿಫ್ ಫೈಝಿ ಜಂಇಯ್ಯತುಲ್ ಮುಅಲ್ಲಿಮೀನ್ ವಾರ್ಷಿಕ ವರದಿ ಮತ್ತು ಆದಾಯ , ವೆಚ್ಚವನ್ನು ಮಂಡಿಸಿದರು. ನಂತರ ನಡೆದ ಚರ್ಚೆಯಲ್ಲಿ ವಲಯ ಮಟ್ಟದ ಶಿಕ್ಷಕರ ಒಕ್ಕೂಟವಾದ ರೈಂಜ್ ಜಂಇಯ್ಯತುಲ್ ಮುಅಲ್ಲಿಮೀನ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಲಹೆಗಳನ್ನು ನೀಡಲಾಯಿತು. ಮದರಸಾ ಶಿಕ್ಷಕರು ಮತ್ತು ಸಂಘಟನಾ ಕಾರ್ಯಕರ್ತರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಮಾದಕ ವ್ಯಸನದ ವಿರುದ್ಧ ಅಭಿಯಾನವನ್ನು ಬಲಪಡಿಸಲು ಮತ್ತು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಸಹಿಗಳನ್ನು ಕರ್ನಾಟಕದ ಮುಖ್ಯಮಂತ್ರಿಗೆ ಸಲ್ಲಿಸಲು ನಿರ್ಧರಿಸಲಾಯಿತು.

ನಂತರ, 2025-26ನೇ ಸಾಲಿನ ಜಂಇಯ್ಯತುಲ್ ಮುಅಲ್ಲಿಮೀನ್ ಕೊಡಗು ಜಿಲ್ಲಾ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ‌ ಎಂ.ಅಬ್ದುರಹ್ಮಾನ್ ಮುಸ್ಲಿಯಾರ್ ಗೋಣಿಕೊಪ್ಪ,ಉಪಾಧ್ಯಕ್ಷರಾಗಿ ಸಿ.ಕೆ.ಸೂಪಿ ದಾರಿಮಿ ಶನಿವಾರಸಂತೆ, ಪಿ.ಅಬ್ದುಲ್ಲಾ ಮುಸ್ಲಿಯರ್ ವಿರಾಜಪೇಟೆ, ಪ್ರಧಾನ ಕಾರ್ಯದರ್ಶಿ ಎಂ.ಆರಿಫ್ ಫೈಝಿ ಸಿದ್ದಾಪುರ, ಸಹಕಾರ್ಯದರ್ಶಿಗಳಾಗಿ ಕೆ ಎಂ.ಅಬೂಬಕರ್ ವಾಫಿ ಸಿದ್ಧಾಪುರ, ಮತ್ತು ಮುಹಮ್ಮದ್ ಹನೀಫ್ ಫೈಝಿ, ಕೋಶಾಧಿಕಾರಿ ತಮ್ಲೀಖ್ ದಾರಿಮಿ ಕುಶಾಲನಗರ ಆಯ್ಕೆಯಾದರು. ಎಸ್ ಕೆ ಎಸ್ ಬಿ ವಿ ಚೆರ್ಮಾನ್ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಪೆರುಂಪಾಡಿ, ಸಂಚಾಲಕ ಕೆ.ಎಂ. ಅಬೂಬಕರ್ ವಾಫಿ ಸಿದ್ಧಾಪುರ, ಕಾರ್ಯಕಾರಿ ಸದಸ್ಯರಾಗಿ ಬಶೀರ್ ಹಸನಿ ನೆಲ್ಲಿಹುದಿಕೇರಿ ಮತ್ತು ಅಬ್ದುಲ್ ರಝಾಕ್ ಫೈಝಿ ಕೊಡ್ಲಿಪೇಟೆ ಹಾಗೂ ಸದಸ್ಯರಾಗಿ ವೈ.ಎಂ.ಉಮರ್ ಫೈಝಿ ಸಿದ್ದಾಪುರ, ಹನೀಫ ಫೈಝಿ ಮಡಿಕೇರಿ,ಉಬೈದ್ ಫೈಝಿ ಬಜಗುಂಡಿ, ಪಿ.ಕೆ.ಹನೀಫ್ ಮುಸ್ಲಿಯಾರ್ ಸಿದ್ದಾಪುರ, ಅಬ್ದುಲ್ ರವೂಫ್ ಹುದವಿ ನೆಲ್ಲಿಹುದಿಕೇರಿ , ಅಬ್ದುಲ್ ಗನಿ ಮದನಿ ಆಯ್ಕೆಯಾದರು.