ಸಿದ್ದಾಪುರ: ಮನೆಯೊಳಗಿದ್ದ ಮೂರು ಹಾವುಗಳ ರಕ್ಷಣೆ

ಸಿದ್ದಾಪುರ: ಮನೆಯೊಳಗಿದ್ದ ಮೂರು ಹಾವುಗಳ ರಕ್ಷಣೆ

ಸಿದ್ದಾಪುರ:ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಬೆಚ್ಚಗಿನ ವಾತಾವರಣ ಇರುವ ಸ್ಥಳಗಳಿಗೆ ಹುಡುಕಾಟ ನಡೆಸುವ ಹಾವುಗಳು ಜಾಗ ಯಾವುದಾದರೇನು ಬೆಚ್ಚಿಗೆದ್ದರೆ ಸಾಕು ಎಂದು ಭಾವಿಸಿ ಮನೆಯ ಅಡುಗೆ ಕೋಣೆಯಲ್ಲಿ ಮೂರು ಹಾವುಗಳು ಪ್ರತ್ಯಕ್ಷಗೊಂಡಿವೆ.ಸಿದ್ದಾಪುರ ಸಮೀಪದ ಕಕ್ಕಟ್ಕಕಾಡು ಗ್ರಾಮದ ಚಂದ್ರ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಹಾವುಗಳು ಪ್ರತ್ಯಕ್ಷಗೊಂಡಿದ್ದು, ಚಂದ್ರ ಎಂಬವರ ಪತ್ನಿ ದೀಪ ಅಡುಗೆ ಕೋಣೆಗೆ ತೆರಳಿದ ಸಂದರ್ಭ ಮೂರು ಹಾವನ್ನ ಕಂಡು ಭಯಭೀತರಾಗಿ ಮನೆಯಿಂದ ಹೊರಗೆ ಬಂದಿದ್ದಾರೆ.ಮನೆಯವರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಉರಗ ರಕ್ಷಕ ಸುರೇಶ್ ಪೂಜಾರಿ ಪರಿಶೀಲಿಸಿದಾಗ ಮೂರು ಹಾವುಗಳು ಇರುವುದು ಕಂಡು ಬಂದಿದೆ. ನಂತರ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು.

 ಉರಗ ಪ್ರೇಮಿ ಸುರೇಶ್ ಮಾತನಾಡಿ ಇತ್ತೀಚೆಗೆ ಹಾವುಗಳು ಮನೆಯೊಳಗೆ ಸೇರುವುದು ಹೆಚ್ಚಾಗಿದೆ ನಿಮ್ಮ ಮನೆಯ ಬಾಗಿಲು ಅಥವಾ ಕಿಟಕಿ ತೆರೆದು ಇಡಬೇಡಿ ಮನೆಯೊಳಗೆ ಕಪ್ಪೆಗಳು ಇದ್ದರೆ ಹಾವುಗಳು ಬರುತ್ತದೆ.ಮನೆಯೊಳಗೆ ಒಮ್ಮೆ ಪರಿಶೀಲಿಸಿ  

ಎಚ್ಚರ ವಹಿಸಬೇಕೆಂದು ಮನವಿ ಮಾಡಿದ್ದಾರೆ.