ಸಿದ್ದಾಪುರ: ಶ್ರಮದಾನ ಮೂಲಕ ಸೇತುವೆ ಸ್ವಚ್ಛತೆ

ಸಿದ್ದಾಪುರ: ಶ್ರಮದಾನ ಮೂಲಕ ಸೇತುವೆ ಸ್ವಚ್ಛತೆ

ಸಿದ್ದಾಪುರ: ಕಾವೇರಿ ನದಿಯ ಸೇತುವೆಯ ರಸ್ತೆ ಮೇಲೆ ಶ್ರಮದಾನದ ಮೂಲಕ ಯುವಕರು ಸ್ವಚ್ಚಗೊಳಿಸಿದ್ದಾರೆ.ನೆಲ್ಲಿಹುದಿಕೇರಿ,ನಲ್ವತ್ತೇಕೆರೆ ಮತ್ತು ಸಿದ್ದಾಪುರದ ಯುವಕರು ಸೇರಿ ಸೇತುವೆಯ ರಸ್ತೆ ಮೇಲೆ ಮಣ್ಣು ತುಂಬಿರುವುರಿಂದ ನೀರು ಹರಿಯದೆ ರಸ್ತೆ ಮೇಲೆ ನಿಂತಿದ್ದು ವಾಹನಗಳು ಚಲಾಯಿಸುವಾಗ ಸಾರ್ವಜನಿಕರ ಮತ್ತು ಮಕ್ಕಳ ಮೇಲೆ ನೀರು ಹಾರುವುದನ್ನು ಮನಗಂಡು, ಯುವಕರು ಸೇರಿ ರಸ್ತೆ ಮೇಲೆ ಇರುವ ಮಣ್ಣು ತೆಗೆದು ಶ್ರಮದಾನ ಮೂಲಕ ಸ್ವಚ್ಛಗೊಳಿಸಿದರು.ಈ ಸಂದರ್ಭ ಅಕ್ಬರ್,ಹಾಶಿಮ್.ಅರ್ಸಲ್ ಶಫೀಕ್,ಬಶೀರ್,ರಿಯಾಜ್, ಶಿಹಾಬ್,ಆಟೋ ಚಾಲಕ ಫಿರೋಜ್ ಇದ್ದರು.