ಹಜ್ ಯಾತ್ರೆ: ಜಿಲ್ಲಾ ಉಪ ಖಾಜಿಗೆ ಬೀಳ್ಕೊಡುಗೆ

ಕಡಂಗ: ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಕೊಡಗಿನ ಹಿರಿಯ ಪಂಡಿತ, ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ನಾಯಿಬ್ ಖಾಜಿಯವರಾದ ಶೈಖುನಾ ಅಬ್ದುಲ್ಲ ಫೈಜಿ ಅವರನ್ನು ಬೆಂಗಳೂರುವಿನಲ್ಲಿರುವ ರಾಜ್ಯ ಹಜ್ ಭವನದಲ್ಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷರರಾದ ಜುಲ್ಫಿಕರ್ ಅಹ್ಮದ್ ಖಾನ್ ಟಿಪ್ಪು ರವರು ಸನ್ಮಾನಿಸಿ ಪ್ರಯಾಣ ಸುಖರವಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದ ಉಸ್ತಾದರ ಪತ್ನಿ ಹಾಗು ಜಿಲ್ಲೆಯಿಂದ ಹಜ್ ಕರ್ಮಕ್ಕೆ ತೆರಳುತ್ತಿರುವವ ಉಪಸ್ಥಿತರಿದ್ದರು.