ಎಸ್.ಜೆ.ಎಂ ಎಮ್ಮೆಮಾಡು ಶಾಖೆಯ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಸಅದಿ ಆಯ್ಕೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು:ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ಎಮ್ಮೆಮಾಡು ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಪ್ರಕ್ರಿಯೆಯು ಎಮ್ಮೆ ಮಾಡುವಿನ ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.
ಎಮ್ಮೆಮಾಡುವಿನ ಸೂಫಿ ಶಹೀದ್ ದರ್ಗಾದಲ್ಲಿ ಅಬ್ದುಲ್ ಅಝೀಝ್ ತಂಙಳ್ ರವರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಅಬ್ದುಲ್ ರಝಾಕ್ ಸಅದಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಮುಫತ್ತಿಶ್ ಯೂಸುಫ್ ಸಖಾಫಿ ಉದ್ಘಾಟಿಸಿದರು.
ಎಮ್ಮೆಮಾಡುವಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಸಖಾಫಿ, ಎಮ್ಮೆಮಾಡು ಮಸೀದಿಯ ಮುದರ್ರಿಸ್ ಹಂಝ ಸಖಾಫಿ ಮೆಲ್ಮುರಿ, ಖತೀಬರಾದ ರಾಝಿಕ್ ಫೈಝಿ ಯವರು ಶುಭ ಹಾರೈಸಿ ಮಾತನಾಡಿದರು.
ಕೂರ್ಗ್ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ) ಜಿಲ್ಲಾ ಕಾರ್ಯದರ್ಶಿ ಆಶ್ರಫ್ ಸಖಾಫಿ ಎಮ್ಮೆಮಾಡು ಹಾಗೂ ರಿಟೈನಿಂಗ್ ಆಫೀಸರ್ ಶಂಸುದ್ದೀನ್ ಅಂಜ್ಜದಿ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಸಅದಿ,ಪ್ರಧಾನ ಕಾರ್ಯದರ್ಶಿಯಾಗಿ ಯೂನುಸ್ ಮರ್ಝೂಖಿ ಸಖಾಫಿ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ತಂಙಳ್,ಎಕ್ಸಾಂ ವೆಲ್ಫೇರ್ ಐಟಿ ಉಪಾಧ್ಯಕ್ಷರಾಗಿ ಮುಹಮ್ಮದ್ ಕುಂಞಿ ಅಮಾನಿ, ಕಾರ್ಯದರ್ಶಿಯಾಗಿ ಝಕರಿಯ ತಂಙಳ್,ಮಿಶನರಿ ಟ್ರೈನಿಂಗ್ ಉಪಾಧ್ಯಕ್ಷರಾಗಿ ಅಹ್ಮದ್ ಶಮೀರ್ ಲತೀಫಿ, ಕಾರ್ಯದರ್ಶಿಯಾಗಿ ಉವೈಸ್ ಸಖಾಫಿ,ಮ್ಯಾಗ್ ಝೀನ್ ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಸಅದಿ,ಕಾರ್ಯದರ್ಶಿಯಾಗಿ ಶಿಹಾಬುದ್ದೀನ್ ಜೌಹರಿ,ಪಿಂಚಣಿ ಉಪಾಧ್ಯಕ್ಷರಾಗಿ ಮಹ್ಮೂದ್ ಸಖಾಫಿ,ಕಾರ್ಯದರ್ಶಿಯಾಗಿ ನಸೀರ್ ಸಖಾಫಿ,ಜಿಲ್ಲಾ ಕೌನ್ಸಿಲರ್ ಗಳಾಗಿ ಅಬ್ಬುಲ್ ರಝಾಕ್ ಸಅದಿ,ಹಂಝ ರಹ್ಮಾನಿ,ನಸೀರ್ ಸಖಾಫಿ,ಯೂನಸ್ ಮರ್ಝೂಖಿಯವರನ್ನು ಆಯ್ಕೆಮಾಡಲಾಯಿತು.