ಕಾಕೋಟುಪರಂಬು:ಕೆಸರುಮಯ ರಸ್ತೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ

ಕಡಂಗ:ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ ಮೂರುರುವಿನಿಂದ ಚೌಕಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಮೊದಲೇ ಈ ರಸ್ತೆಯಲ್ಲಿ ಡಾಂಬರೀಕಾರಣ ಆಗಲಿಲ್ಲ. ಮಳೆಯ ಸಂಧರ್ಭದಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದು ವಿದ್ಯಾರ್ಥಿಗಳು, ಹಿರಿಯರು ಹಾಗೂ ಸಾರ್ವಜನಿಕರು ನಡೆದಾಡಲು ಹಾಗೂ ವಾಹನಗಳನ್ನು ಸಂಚಾರಿಸಲು ಸಾಧ್ಯವಾಗದೆ ತೊಂದರೆಗಿಡಾಗಿದ್ದಾರೆ.ಇದನ್ನು ಗಮನಿಸಿದ ಸ್ಥಳೀಯರಾದ ಎಂ ಹೆಚ್ ಸಂಶುದ್ದೀನ್ ರಸ್ತೆಯಲ್ಲಿರುವ ನೀರನ್ನು ಚರಂಡಿಗೆ ಬಿಡುವುದರ ಮೂಲಕ ಪಾದಚಾರಿಗಳಿಗೆ ಅನುಕೂಲ ಮಾಡಲಾಯಿತು .ಮಳೆಗಾಲದ ನಂತರ ಈ ರಸ್ತೆಯನ್ನು ಕೂಡ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸರಿಪಡಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ನೌಫಲ್