ಮಾರ್ಚ್ 03ರಂದು ಶ್ರೀಯೋಗಿ ನಾರಾಯಣ ಯತೀಂದ್ರ ಅವರ 300ನೇ ಜಯಂತೋತ್ಸವ
admincoorgdaily

ಮಡಿಕೇರಿ: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಯೋಗಿನಾರೇಯಣ ಬಲಿಜ ಸಂಘದ ವತಿಯಿಂದ ಶ್ರೀಯೋಗಿ ನಾರಾಯಣ ಯತೀಂದ್ರರ ೩೦೦ನೇ ಜಯಂತೋತ್ಸವ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ಮಾ.೩ ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಟಿ.ಜಿ.ಗಣೇಶ್ ನಾಯ್ಡು ತಿಳಿಸಿದ್ದಾರೆ.
ಮಾ.೩ರಂದು ಬೆಳಗ್ಗೆ ೧೧ ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಯೋಗಿ ನಾರೇಯಣ ಬಲಿಜ ಸಂಘದ ಜಿಲ್ಲಾಧ್ಯಕ್ಷ ಟಿ.ಜಿ.ಗಣೇಶ್ ನಾಯ್ಡು ಇತರರು ಪಾಲ್ಗೊಳ್ಳಲಿದ್ದಾರೆ.
ಜಯಂತೋತ್ಸವ ಕಾರ್ಯಕ್ರಮಕ್ಕೆ ಬಲಿಜ ಸಮುದಾಯ ಬಾಂಧವರು ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಘದ ಆರ್.ಯಶ್ವಂತ್ ಕುಮಾರ್, ಟಿ.ಎಚ್.ಸುದಿಂದ್ರ, ಟಿ.ಆರ್.ಸುಬ್ರಮಣಿ ಇದ್ದರು.