ದಟ್ಟ ಮಂಜಿನಿಂದ ಇಂಡಿಯಾ& ಸೌತ್ ಆಫ್ರಿಕಾ ನಡುವಿನ ನಾಲ್ಕನೇ ಟಿ20 ರದ್ದು; ಲಕ್ನೋದಲ್ಲಿ ಟಾಸ್‌ ಕೂಡ ನಡೆಯದೆ ಪಂದ್ಯ ಸ್ಥಗಿತ

ದಟ್ಟ ಮಂಜಿನಿಂದ ಇಂಡಿಯಾ& ಸೌತ್ ಆಫ್ರಿಕಾ ನಡುವಿನ ನಾಲ್ಕನೇ ಟಿ20 ರದ್ದು; ಲಕ್ನೋದಲ್ಲಿ ಟಾಸ್‌ ಕೂಡ ನಡೆಯದೆ ಪಂದ್ಯ ಸ್ಥಗಿತ

ಲಕ್ನೋ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ಹವಾಮಾನ ವೈಪರಿತ್ಯದಿಂದಾಗಿ ರದ್ದುಗೊಂಡಿದೆ. ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣವನ್ನು ದಟ್ಟ ಮಂಜು ಆವರಿಸಿಕೊಂಡ ಪರಿಣಾಮ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ ಎಂದು ಅಂಪೈರ್‌ ಗಳು ಘೋಷಿಸಿದರು.

ಪೂರ್ವನಿಗದಿಯಂತೆ ಸಂಜೆ 6.30ಕ್ಕೆ ಟಾಸ್‌ ನಡೆಯಬೇಕಿದ್ದು, 7 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಸಂಜೆ ವೇಳೆ ಮೈದಾನದಲ್ಲಿ ಗೋಚರತೆ ತೀವ್ರವಾಗಿ ಕುಸಿದಿತ್ತು. ರಾತ್ರಿ 9.30ರವರೆಗೂ ಕಾದರೂ ಮಂಜು ಕಡಿಮೆಯಾಗದ ಹಿನ್ನೆಲೆಯಲ್ಲಿ ಟಾಸ್‌ ಕೂಡ ನಡೆಯದೆ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು.

ಪಂದ್ಯ ರದ್ದಾದ ಕಾರಣ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾದರೂ, ಸರಣಿಯಲ್ಲಿ ಈಗಾಗಲೇ ಮುನ್ನಡೆ ಸಾಧಿಸಿರುವ ಭಾರತ ತಂಡಕ್ಕೆ ಇದರಿಂದ ಯಾವುದೇ ಹಿನ್ನಡೆಯಾಗಿಲ್ಲ. ಹವಾಮಾನ ಕಾರಣದಿಂದ ಸ್ಥಗಿತಗೊಂಡ ಈ ಪಂದ್ಯದಿಂದ ಸರಣಿಯ ಸ್ಥಿತಿಗತಿಯಲ್ಲಿ ಬದಲಾವಣೆ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.