ಗೋಣಿಕೊಪ್ಪ; ಪ್ರಗತಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ ವತಿಯಿಂದ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಆಟೋ ಚಾಲಕರಿಗೆ ಕಾರ್ಮಿಕ ಕಾರ್ಡ್ ವಿತರಣೆ

Jan 20, 2026 - 16:35
 0  395
ಗೋಣಿಕೊಪ್ಪ; ಪ್ರಗತಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ ವತಿಯಿಂದ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಆಟೋ ಚಾಲಕರಿಗೆ ಕಾರ್ಮಿಕ ಕಾರ್ಡ್ ವಿತರಣೆ

ಗೋಣಿಕೊಪ್ಪ: ಪ್ರಗತಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ ವತಿಯಿಂದ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಆಟೋ ಚಾಲಕರಿಗೆ ಕಾರ್ಮಿಕ ಕಾರ್ಡ್ ವಿತರಣೆ ಮಾಡಲಾಯಿತು.

ಗೋಣಿಕೊಪ್ಪ ಪಂಚಾಯ್ತಿ ಹಳೆ ಕಟ್ಟಡ ಸಂಭಾಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 90ಕ್ಕೂ ಹೆಚ್ಚು ಆಟೋ ಚಾಲಕರಿಗೆ ವಿತರಣೆ ನಡೆಯಿತು.

ಮಡಿಕೇರಿ ಕಾರ್ಮಿಕ ಇಲಾಖೆ ಅಧಿಕಾರಿ ವಾಣಿ ಮಾತನಾಡಿ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಪಿಂಚಣಿ ಸವಲತ್ತು ಪಡೆಯಲು 40 ವರ್ಷದ ಒಳಗಿನವರು ಅರ್ಹರಾಗಿರುತ್ತಾರೆ. ಜೊತೆಗೆ ಮೋಟರು ಸಾರಿಗೆ ಸಂಬAಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳ ಸದುಪಯೋಗಕ್ಕೆ ಆಟೋ ಚಾಲಕರು ಗಮನಹರಿಸಬೇಕು ಎಂದು ಹೇಳಿದರು. ಕಾರ್ಮಿಕ ಇಲಾಖೆಯಲ್ಲಿ ಸಿಗುವ ಹಲವಾರು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. 

ಸಾಹಿತಿ ಜಗದೀಶ್ ಜೋಡುಬೀಟಿ ಮಾತನಾಡಿ, ಆಟೋ ಚಾಲಕರು ಸಾಮಾಜಿಕ ಬದ್ಧತೆಯೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಾಡಿನ ನೆಲ- ಜಲ, ಸಂಸ್ಕೃತಿ, ಭಾಷೆಗಳ ಸಮೃದ್ಧಿ ಮತ್ತು ಮಹಿಳೆ, ಮಕ್ಕಳ, ವೃದ್ಧರ, ಅನಾರೋಗ್ಯ ಪೀಡಿತರ ಸುರಕ್ಷತೆಯೆಡೆಯ ಜವಾಬ್ದಾರಿಯು ಆಟೋ ಚಾಲಕರಾದ್ದಾಗಿದೆ.

ಅಂತಹ ಪ್ರಾಮಾಣಿಕ ನಿಷ್ಠಾವಂತ ಆಟೋ ಚಾಲಕರ ಬದುಕಿನಲ್ಲಿ ವ್ಯತ್ಯಾಸಗಳು ಉಂಟಾದಾಗ ಸರಿಪಡಿಸುವ ಜವಾಬ್ದಾರಿ ಸಮಾಜದ ಹೊಣೆಗಾರಿಕೆಯೂ ಹೌದು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಆಟೋ ಚಾಲಕರ ಅಥವಾ ಮೋಟರ್ ವಾಹನ ಚಾಲಕರಿಗೆ ಪಿಂಚಣಿ ಯೋಜನೆ ಜತೆಗೆ, ಹಲವಾರು ಅಪಘಾತ ವಿಮೆಗಳ ಯೋಜನೆಗಳನ್ನು ಜಾರಿಗೆ ತಂದು ಕಾರ್ಮಿಕರಡೆಗೆ ತಲುಪಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.

ಈ ಸವಲತ್ತುಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಂಡು ಆಕಸ್ಮಿಕವಾಗಿ ಮುಂದೆ ಎದುರಾಗಬಹುದಾದ ಆಘಾತಗಳಿಂದ ವಿಚಲಿತರಾಗುವ ವ್ಯವಸ್ಥೆಯಿಂದ ಹೊರಾಗುಳಿದುಕೊಂಡು ಆತ್ಮಸ್ಥೈರ್ಯದೊಂದಿಗೆ ಜೀವನೋತ್ಸವವನ್ನು ವೃದ್ದಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಗತಿ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಸಲಹೆಯೊಂದಿಗೆ ಸಂಘದ ಅಧ್ಯಕ್ಷ ಡಾಡು ಜೋಸೆಫ್ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ವಿನೋದ್, ಕಾರ್ಯದರ್ಶಿ ಸನ್ನು ಕಾರ್ಯಪ್ಪ, ಖಜಾಂಚಿ ಪ್ರಕಾಸ್, ನಿಕಟಪೂರ್ವ ಅಧ್ಯಕ್ಷ ಭೀಮಯ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ, ಪೊನ್ನಂಪೇಟೆ ಕಾರ್ಮಿಕ ಇಲಾಖೆ ಅಧಿಕಾರಿ ಕಾವ್ಯ, ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರುಗಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0