ಹೇಮಲತ ಜಿ. ಎಂ. ಅವರಿಗೆ ಪಿಎಚ್.ಡಿ ಪದವಿ
ಮಡಿಕೇರಿ; ಜಿಲ್ಲೆಯ ಕುಶಾಲನಗರದ ಗುಮ್ಮನಕೊಲ್ಲಿ, ಗ್ರಾಮದ ನಿವಾಸಿ ಶ್ರೀಮತಿ ವಿಶಾಲಾಕ್ಷಮ್ಮ ಅವರ ಪುತ್ರಿ ಹೇಮಲತ ಜಿ. ಎಂ. ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.
ಹೇಮಲತ ಅವರು ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಶ್ವನಾಥ್ ಹೆಚ್. ಅವರ ಮಾರ್ಗದರ್ಶನದಲ್ಲಿ “ವೀಣಾ ಶಾಂತೇಶ್ವರ ಮತ್ತು ದು. ಸರಸ್ವತಿಯವರ ಸಾಹಿತ್ಯದಲ್ಲಿ ಪ್ರತಿಭಟನಾತ್ಮಕ ನೆಲೆಗಳು” ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು.
ದಿನಾಂಕ 30.01.2026ರ ಶುಕ್ರವಾರದಂದು ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ, ಗೌರವಾನ್ವಿತ ರಾಜ್ಯಪಾಲರ ಉಪಸ್ಥಿತಿಯಲ್ಲಿ ಹೇಮಲತ ಅವರಿಗೆ ಪಿಎಚ್.ಡಿ ಪದವಿ ಪ್ರಧಾನ ಮಾಡಲಾಯಿತು.