ಕಾಫಿ ದಸರಾ 2026 ಗೆ ಮತ್ತಷ್ಟು ಮೆರುಗು ನೀಡಲು ಬೆಂಗಳೂರಿನಲ್ಲಿ ಮಹತ್ವದ ಸಭೆ; ಭಾರತೀಯ ಕಾಫಿ ಬೋರ್ಡ್ ಅಧ್ಯಕ್ಷರು ಹಾಗೂ ಸಿ ಇ ಒ ಭೇಟಿ ಮಾಡಿ ಚರ್ಚೆ ನಡೆಸಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ

Jul 15, 2026 - 20:15
 0  91
ಕಾಫಿ ದಸರಾ 2026 ಗೆ ಮತ್ತಷ್ಟು ಮೆರುಗು ನೀಡಲು ಬೆಂಗಳೂರಿನಲ್ಲಿ ಮಹತ್ವದ ಸಭೆ; ಭಾರತೀಯ ಕಾಫಿ ಬೋರ್ಡ್ ಅಧ್ಯಕ್ಷರು ಹಾಗೂ ಸಿ ಇ ಒ ಭೇಟಿ ಮಾಡಿ ಚರ್ಚೆ ನಡೆಸಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ

ಬೆಂಗಳೂರು; ಐತಿಹಾಸಿಕ ಮಡಿಕೇರಿ ದಸರಾ ದಲ್ಲಿ ಶಾಸಕ ಡಾ. ಮಂತರ್ ಗೌಡ ರವರ ವಿಶೇಷ ಮುತುವರ್ಜಿಯಿಂದ ಪ್ರಾರಂಭಗೊಂಡ ಕಾಫಿ ದಸರಾ ಅಭೂತ ಪೂರ್ವ ಯಶಸ್ಸು ಕಂಡಿದ್ದು ಮುಂಬರುವ 3 ನೇ ವರ್ಷದ ಕಾಫಿ ದಸರಾ ವನ್ನು ಮತ್ತಷ್ಟೂ ಪರಿಣಾಮಕಾರಿಯಾಗಿ ನಡೆಸಲು ಶಾಸಕ ಡಾ. ಮಂತರ್ ಗೌಡರವರು ವಿಶೇಷ ಆಸಕ್ತಿ ವಹಿಸಿದ್ದು ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಭಾರತೀಯ ಕಾಫಿ ಬೋರ್ಡ್ ಕೇಂದ್ರ ಕಛೇರಿಯಲ್ಲಿ ಕಾಫಿ ಬೋರ್ಡ್ ಆಫ್ ಇಂಡಿಯಾ ಅಧ್ಯಕ್ಷರಾದ ದಿನೇಶ್ ಹಾಗೂ ಸಿ ಇ ಓ ಕಾರ್ಯದರ್ಶಿ ಕೂರ್ಮಾ ರಾವ್ ಐಎಎಸ್ ರವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.

ಜಿಲ್ಲೆಯ ಕಾಫಿ ಬೆಳೆಗಾರ ಎದುರಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿ, ಕೊಡಗಿನ ಕಾಫಿಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಈ ಬಾರಿಯ ಕಾಫಿ ದಸರಾಗೆ ಕಾಫಿ ಬೋರ್ಡ್ ಆಫ್ ಇಂಡಿಯಾ ಮೂಲಕ ಸಹಕಾರ ನೀಡುವಂತೆ ಮನವಿ ಸಲ್ಲಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0