ಹಾತೂರು ಬಳಿ ಲಾರಿ ಹಾಗೂ ಬೈಕ್ ಡಿಕ್ಕಿ ಘಟನೆ: ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ಮೃತಪಟ್ಟ ಬೈಕ್ ಸವಾರ ; ಬೆಕ್ಕೆಸುಡ್ಲೂರು ಗ್ರಾಮದ ಸುಳ್ಳಿಮಡ ಭಜನ್ ದೇವಯ್ಯ ಮೃತಪಟ್ಟ ಯುವಕ

Jan 4, 2026 - 23:00
 0  2.8k
ಹಾತೂರು ಬಳಿ ಲಾರಿ ಹಾಗೂ ಬೈಕ್ ಡಿಕ್ಕಿ ಘಟನೆ:  ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ಮೃತಪಟ್ಟ ಬೈಕ್ ಸವಾರ ; ಬೆಕ್ಕೆಸುಡ್ಲೂರು ಗ್ರಾಮದ ಸುಳ್ಳಿಮಡ ಭಜನ್ ದೇವಯ್ಯ ಮೃತಪಟ್ಟ ಯುವಕ

ಗೋಣಿಕೊಪ್ಪ:ಹಾತೂರು ಸಮೀಪ ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಸ್ವರೂಪಗಳ ಗಾಯಗಳು ಉಂಟಾಗಿ ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಮೃತಪಟ್ಟಿದ್ದಾನೆ. ಮೃತಪಟ್ಟ ಯುವಕ ಬೆಕ್ಕೆಸುಡ್ಲೂರು ನಿವಾಸಿ ಸುಳ್ಳಿಮಡ ಭಜನ್ ದೇವಯ್ಯ (27).

ಕೊಡಗಿನಿಂದ ಕೇರಳಕ್ಕೆ ಕೊಡಗು ರೈಡರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದೆ ಯಾತ್ರೆಯಲ್ಲಿ ಪಾಲ್ಗೊಂಡು ಕೇರಳದಿಂದ ಇಂದು ಸಂಜೆ ವಾಪಸಾಗುತ್ತಿದ್ದಾಗ ರಾತ್ರಿ 8:20ರ ಸಮಯದಲ್ಲಿ ಹಾತೂರಿನ ವನಭದ್ರಕಾಳಿ ದೇವಸ್ಥಾನದ ಸಮೀಪ ಕಾರು ಒಂದನ್ನು ಓವರ್ಟೇಕ್ ಮಾಡಿ ಮುನ್ನುಗುತ್ತಿದ್ದಾಗ ಮುಂಭಾಗದಲ್ಲಿ ಬಂದ ಲಾರಿಗೆ ಡಿಕ್ಕಿ ಪಡಿಸಿದ್ದಾನೆ ಎಂದು ಹೇಳಲಾಗಿದೆ.

ಮೃತ ಯುವಕನ ತಂದೆ ಕಳೆದ ಮೂರು ವರ್ಷಗಳ ಹಿಂದೆ ಬೆಕ್ಕೆಸುಡ್ಲೂರಿನಲ್ಲಿ ತನ್ನ ಮಗಳ ಮದುವೆಯ ಸಂದರ್ಭದಲ್ಲಿ ಅಪಘಾತಕಿಡಾಗಿ ಮೃತಪಟ್ಟಿದ್ದರು. ನಂತರ ಮೃತನ ತಾಯಿ ಕೂಡ ಗೋಣಿಕೊಪ್ಪಲಿನಲ್ಲಿ ನಿಂತಿದ್ದ ಲಾರಿಗೆ ಕಾರು ದಿಕ್ಕಿಪಡಿಸಿ ಮೃತಪಟ್ಟಿದ್ದರು.

ಇದೀಗ ಲೋಪಮುದ್ರ ಆಸ್ಪತ್ರೆಯಲ್ಲಿ ಮೃತ ದೇಹವಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ನಾಳೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 9
Wow Wow 0