ನಾಳೆ ಕಾಡಾನೆ ಕಾಡಿಗೆ ಅಟ್ಟಿಸುವ ಕಾರ್ಯಾಚರಣೆ

Jul 16, 2026 - 19:40
 0  344
ನಾಳೆ ಕಾಡಾನೆ ಕಾಡಿಗೆ ಅಟ್ಟಿಸುವ ಕಾರ್ಯಾಚರಣೆ

ಸಿದ್ದಾಪುರ : ಕುಶಾಲನಗರ ಮೀನುಕೊಲ್ಲಿ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಅಭ್ಯತ್ ಮಂಗಳ, ಕಾಟಿಬಾಣೆ, ಬೆಟ್ಟದಕಾಡು, ನೆಲ್ಯಾಹುದಿಕೇರಿ, ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಮರಳಿ ಓಡಿಸುವ ಕಾರ್ಯಾಚರಣೆ ಜು.17.ರಂದು ನಡೆಯಲಿದ್ದು, ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವಂತೆ ಹಾಗೂ ಗ್ರಾಮಸ್ಥರು ಶಾಲಾ ಮಕ್ಕಳು ಮತ್ತು ವಾಹನ ಚಾಲಕರು ಎಚ್ಚರಿಕೆಯಿಂದ ಇದ್ದು ಕಾಡಾನೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಹಾಗೂ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು ಕುಶಾಲನಗರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0