ಪೆಟ್ರೋಲ್ ಗೆ 2.61, ಡೀಸೆಲ್ ಗೆ 2.71 ರೂಪಾಯಿ ಹೆಚ್ಚಳ !

ಪೆಟ್ರೋಲ್ ಗೆ 2.61, ಡೀಸೆಲ್ ಗೆ 2.71 ರೂಪಾಯಿ ಹೆಚ್ಚಳ !

ಹೊಸದಿಲ್ಲಿ: ಇರಾನ್ ಯುದ್ಧದ ಪರಿಣಾಮ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ದರಗಳನ್ನು ಕಳೆದ 11 ದಿನಗಳಲ್ಲಿ ನಾಲ್ಕನೇ ಬಾರಿ ಹೆಚ್ಚಿಸಲಾಗಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‌ಗೆ 2.61 ರೂ. ಹಾಗೂ ಡೀಸೆಲ್‌ ದರವನ್ನು 2.71 ರೂ. ಹೆಚ್ಚಿಸಲಾಗಿದೆ. ಈ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 102.12 ರೂ.ಗೆ ಹಾಗೂ ಡೀಸೆಲ್ ದರ 95.20 ರೂ.ಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಂದು ಲೀಟ‌ರ್ ಪೆಟ್ರೋಲ್ ದರ 110 ರೂ. ಗಡಿ ದಾಟಿದೆ. ಕಳೆದ 11 ದಿನದಲ್ಲಿ ಪೆಟ್ರೋಲ್ ಗೆ 7.96 ರೂ. ದರ ಹೆಚ್ಚಳವಾಗಿದೆ.