Kodagu

ಎರಡು ಬೈಕ್ ಗಳ ನಡುವೆ ಅಪಘಾತ: ಕೇರಳ ಮೂಲದ ಸವಾರ ಮೃತ್ಯು

admincoorgdaily

ಎರಡು ಬೈಕ್ ಗಳ ನಡುವೆ ಅಪಘಾತ: ಕೇರಳ ಮೂಲದ ಸವಾರ ಮೃತ್ಯು

ಮಡಿಕೇರಿ, ಮೇ 24: ಎರಡು ಬೈಕುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕೇರಳ ಮೂಲದ ಸವಾರ ಸಾವನ್ನಪ್ಪಿದ್ದು, ಇಬ್ಬರು ಅವು ತೀವ್ರವಾಗಿ ಗಾಯಗೊಂಡಿರುವ ಘಟನೆ ಪೆರಾಜೆಯಲ್ಲಿ ಸಂಭವಿಸಿದೆ.

ಕೇರಳದ ಪಯ್ಯನೂರಿನ ನಿವಾಸಿ, ಗುತ್ತಿಗೆದಾರ ಪ್ರದೀಪನ್ ಎಂ. ಮೃತ ತಿಗೆ ದುರ್ದೈವಿ. ಕೆಲಸದ ನಿಮಿತ್ತ ಪೆರಾಜೆಯಿಂದ ಸುಳ್ಯ ಕಡೆಗೆ ಪ್ರದೀಪನ್ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಲ್ಲುಗುಂಡಿಯ ಸುಮಂತ್ ಹಾಗೂ ಸಂಪಾಜೆಯ ಚಡಾವಿನ ರವಿಚಂದ್ರನ್ ಎಂಬವರು ಬರುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.

ಸುಮಂತ್, ರವಿಚಂದ್ರನ್‌ಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪಾಜೆ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.