ಶನಿವಾರಸಂತೆ; ಕಣಿವೆ-ಬಸವನಹಳ್ಳಿ ಗ್ರಾಮದಲ್ಲಿ 45ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪ್ರಾರಂಭ

ಶನಿವಾರಸಂತೆ; ಕಣಿವೆ-ಬಸವನಹಳ್ಳಿ ಗ್ರಾಮದಲ್ಲಿ 45ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪ್ರಾರಂಭ

ಶನಿವಾರಸಂತೆ : ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಿವೆ ಬಸವನಹಳ್ಳಿ ಗ್ರಾಮದ ರಸ್ತೆ ಅನೇಕ ವರ್ಷಗಳಿಂದ ಅವ್ಯವಸ್ಥೆಯಿಂದ ಕೂಡಿತ್ತು.

ಇದನ್ನು ಮನಗಂಡು ಸ್ವತಃ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡರವರು ಸ್ವತಃ ತಾವೇ ಆಸಕ್ತಿವಹಿಸಿಕೊಂಡು ಸರ್ಕಾರದ ಅನುದಾನ RDPR 2025-26ನೇ ಯೋಜನೆಯ ರೂ 45ಲಕ್ಷ ವಿನಿಯೋಗಿಸಿ CC ರಸ್ತೆ ಕೆಲಸ ಪ್ರಾರಂಭ ಮಾಡಿದ್ದಾರೆ.ಇದೀಗ ಈ ಗ್ರಾಮದ ರಸ್ತೆ ಕೆಲಸ ಬರದಿಂದ ಸಾಗಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದು ಅನೇಕ ವರ್ಷದ ಈ ಗ್ರಾಮಸ್ಥರ ಕನಸು ನನಸಾಗಿದೆ. ಕೆಲವೇ ದಿನದಲ್ಲಿ ಕೆಲಸ ಸಂಪೂರ್ಣವಗಳಿದ್ದು ಗ್ರಾಮಸ್ಥರು ರಸ್ತೆ ಅಗಲೀಕರಣಕ್ಕೆ ಬೇಕಾಗುವಷ್ಟು ತಮ್ಮ ಜಾಗವನ್ನು ಬಿಟ್ಟುಕೊಡುವ ಮೂಲಕ ಸಹಕಾರ ನೀಡಿದ್ದಾರೆ.