ಸಿದ್ದಾಪುರ; ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಗುಂಡು ತಗುಲಿ ವ್ಯಕ್ತಿಯೋರ್ವನಿಗೆ ಗಂಭೀರ ಗಾಯ

Feb 24, 2026 - 21:42
Feb 24, 2026 - 22:57
 0  2.4k
ಸಿದ್ದಾಪುರ; ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಗುಂಡು ತಗುಲಿ ವ್ಯಕ್ತಿಯೋರ್ವನಿಗೆ ಗಂಭೀರ ಗಾಯ

ಮಡಿಕೇರಿ; ಮಂಗಳವಾರ ಮಧ್ಯಾಹ್ನ 12ಗಂಟೆಗೆ  ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಗುಂಡು ತಗುಲಿ ವ್ಯಕ್ತಿಯೋರ್ವನಿಗೆ ಗಂಭೀರ ಗಾಯವಾಗಿ, ಪ್ರಾಣಪಾಯದಿಂದ ಪಾರಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ  ಅಮ್ಮತ್ತಿ ಸಮೀಪದ ಆನಂದಪುರದಲ್ಲಿ ನಡೆದಿದೆ.

ಪುಲಿಯೇರಿ ಗ್ರಾಮದ ಆನಂದಪುರ ನಿವಾಸಿ ಆನೆಸ್‌ಡಿಕುಂಞ (63) ಎಂಬುವರು ಗುಂಡು ತಗುಲಿದ ವ್ಯಕ್ತಿ.ಬಚ್ಚಲೂ‌ ಕೊಠಡಿಗೆ ಸೌದೆಗಳನ್ನು ತೆಗೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ದಿಢೀರನೆ ತೂರಿ ಬಂದು ಗುಂಡು ಎದೆ ಭಾಗಕ್ಕೆ ಹಾಗೂ,ಕಾಲಿಗೆ ತಗುಲಿ ಗಂಭೀರ ಗಾಯವಾಗಿದೆ.  ಗಾಯಗೊಂಡಿದ್ದ ವ್ಯಕ್ತಿ ಪುತ್ರಿ ತಕ್ಷಣವೇ ಸ್ಥಳೀಯರ ನೆರವಿನಿಂದ ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲಿಸಿದರು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಗುಂಡು ಯಾವ ಕಡೆಯಿಂದ ‌ಹಾದು ಬಂದಿದೆ ಎಂದು ತಿಳಿದು ಬಂದಿರುವುದಿಲ್ಲ.ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0