ಸಿದ್ದಾಪುರ; ಕಾಡಾನೆ ದಾಳಿಗೆ ಬೆಳೆಗಾರ ಬಲಿ, ನಾಳೆ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ

Mar 12, 2026 - 21:36
Mar 12, 2026 - 21:42
 0  950
ಸಿದ್ದಾಪುರ; ಕಾಡಾನೆ ದಾಳಿಗೆ ಬೆಳೆಗಾರ ಬಲಿ, ನಾಳೆ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ
ಕಾಡಾನೆ(ಸಾಂದರ್ಭಿಕ ಚಿತ್ರ)

ಸಿದ್ದಾಪುರ: ವಿರಾಜಪೇಟೆ ವಿಭಾಗ ವ್ಯಾಪ್ತಿಗೆ ಬರುವ ವಿರಾಜಪೇಟೆ ವಲಯದ ಸಿದ್ದಾಪುರದಲ್ಲಿ 12-03-2026 ರಂದು ಮಾನವ ಸಾವಿಗೆ ಕಾರಣವಾದ ಒಂದು ಗಂಡು ಕಾಡಾನೆಯನ್ನು ಸೆರೆ ಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು, ಬೆಂಗಳೂರು ಆದೇಶ ನೀಡಿದ್ದು, ಅದರಂತೆ, ಸದರಿ 01 ಗಂಡು ಕಾಡಾನೆಯನ್ನು ದಿನಾಂಕ 13.03.2026 ರಿಂದ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಆದುದರಿಂದ, 01 ಗಂಡು ಕಾಡಾನೆಯನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸುವ ಸಮಯದಲ್ಲಿ ಅಧಿಕಾರಿ/ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಯಾವುದೇ ಅಪಘಾತಗಳು ಸಂಭವಿಸಿದ್ದಂತೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು ಇಲಾಖೆಗೆಯೊಂದಿಗೆ ಸಹಕರಿಸುವಂತೆ ವಲಯ ಅರಣ್ಯ ಅಧಿಕಾರಿ ಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0