ವಿರಾಜಪೇಟೆ:ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿಗೆ ಆರು ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

Jul 18, 2026 - 13:09
 0  451
ವಿರಾಜಪೇಟೆ:ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿಗೆ ಆರು ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ವಿರಾಜಪೇಟೆ : ಪತಿ ಮತ್ತು ಪತ್ನಿ ನಡುವೆ ಕಲಹವಾಗಿ ಪತಿಯು ಪತ್ನಿಯ ಮೇಲೆ ಮಾರಕಾಸ್ತೃದಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಭಂದಿಸಿದಂತೆ ವಿರಾಜಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತು ಜೆ.ಎಂ.ಎಫ್. ಸಿ ನ್ಯಾಯಾಲಯವು ಹಲ್ಲೆ ನಡೆಸಿದಾತನಿಗೆ ಕಾರಗೃಹ ಶಿಕ್ಷೆ ಮತ್ತು ದಂಢ ವಿಧಿಸಿ ತೀರ್ಪು ನೀಡಿದೆ

ವಿರಾಜಪೇಟೆ ನಗರದ ವಿಧ್ಯಾನಗರದ ನಿವಾಸಿ ಅಜೀಜ್ ಎಂಬುವವರ ಪುತ್ರ ಎಂ.ಎ ಮುನೀರ್ ಪ್ರಾಯ 42 ವರ್ಷ ಶಿಕ್ಷೆಗೆ ಗುರಿಯಾದ ವ್ಯಕ್ತಿ:

ಘಟನೆಯ ವಿವರ:

ವಿರಾಜಪೇಟೆ ನಗರದ ವಿದ್ಯಾನಗರದ ನಿವಾಸಿ ಮುನೀರ್ ಎಂಬುವವ ವ್ಯಕ್ತಿಯು ಜಾಕೀರಾ (29) ವರ್ಷ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. 20-12-2020 ರಂದು ಬೆಳಿಗ್ಗೆ ಉಪಹಾರ ಮಾಡುತಿದ್ದ ವೇಳೆ ಪತಿ ಮತ್ತು ಪತ್ನಿಯರ ನಡುವೆ ಕಲಹವಾಗಿದೆ. ಈ ಸಂಧರ್ಭ ಮುನೀರ್ ಪತ್ನಿ ಜಾಕೀರಾಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಅಲ್ಲದೆ ಪತ್ನಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಕಲಹದ ಸಂದರ್ಭ ಜಾಕೀರಳು ತನ್ನ ಬಳಿಯಿದ್ದ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತಿದ್ದಳು. ಸೆರೆ ಹಿಡಿದ ಮೊಬೈಲನ್ನು ಕಿತ್ತು ಎಸೆದಿದ್ದಾನೆ ಮುನೀರ್. ಆವೇಶ ಶಮನವಾಗದ ಮುನೀರ್ ಪತ್ನಿ ಜಾಕೀರಳನ್ನು ಕೊಲೆ ಮಾಡಲು ಮುಂದಾಗಿದ್ದು ಮನೆಯ ಕೋಣೆಯಲ್ಲಿದ್ದ ಕತ್ತಿಯಿಂದ ಪತ್ನಿಯ ಮೇಲೆ ಪ್ರಹಾರ ಮಾಡಲು ಯತ್ನಿಸಿದ್ದಾನೆ.ತಡೆಯಲು ಯತ್ನಿಸಿದ ಜಾಕೀರಳ ಕೈಬೆರಳು ತುಂಡಾಗಿ ಅಧಿಕವಾಗಿ ರಕ್ತ ಶ್ರವಾಗಿದೆ. ಘಟನೆಯನ್ನು ದಂಪತಿಗಳ ಪುತ್ರ ಕಣ್ಣಾರೆ ನಿಂತು ನೋಡಿದ್ದಾನೆ. ಹಲ್ಲೆ ನಡೆಸಿ ಸ್ಥಳದಿಂದ ತೆರಳಿದ್ದ ಮುನೀರ್. ಗಾಯಾಳು ಜಾಕೀರಳು ಮನೆಯಲ್ಲಿದ್ದ ಬ್ಯಾಂಡೇಜ್ ಧರಿಸಿಕೊಂಡು ರಕ್ತದ ಮಡುವಿನಲ್ಲಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನಂತರ ವಿರಾಜಪೇಟೆ ನಗರ ಠಾಣೆಯಲ್ಲಿ ಪತಿ ಮುನೀರ್ ನ ಮೇಲೆ ಕ್ರಮ ಜರುಗಿಸುವಂತೆ ದೂರು ಸಲ್ಲಿಸಿದ್ದಾಳೆ. ಪೊಲೀಸರು ಮುನೀರ್ ನ ಮೇಲೆ 323 ಐ.ಪಿ.ಸಿ, 307 ಐ.ಪಿ.ಸಿ ಮತ್ತು 506 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿದ್ದಾರೆ. ನಗರದ ಠಾಣಾಧಿಕಾರಿಗಳಾಗಿದ್ದ ಜಗದೀಶ್ ಧೂಳ್ ಶೆಟ್ಟಿ ಅವರು 17-03-2021 ರಲ್ಲಿ ನ್ಯಾಯಾಲಯಕ್ಕೆ ಧೋಷಾರೋಪಣ ಪತ್ರ ಸಲ್ಲಿಸಿದ್ದರು.

ವಿರಾಜಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು 16/07/2026 ರಂದು ಪ್ರಕರಣದ ಆರೋಪಿಯಾಗಿರುವ ಮುನೀರ್ ತಂದೆ ಆಜೀಜ್ ಅವರಿಗೆ ಕಲಂ 324, 6 ತಿಂಗಳು ಸಾದಾ ಸೆರೆಮನೆ ವಾಸ ಶಿಕ್ಷೆ 10,000/- ರೂ ಗಳು ದಂಡ ವಿಧಿಸಿದ್ದು ದಂಡ ಪಾವತಿಸಲು ತಪ್ಪಿದ್ದರೆ 2 ತಿಂಗಳ ಸಾದಾ ಸೆರೆಮನೆ ವಾಸ ಶಿಕ್ಷೆ ವಿಧಿಸಿದೆ. ಕಲಂ 323 ಕ್ಕೆ 1000/-ರೂಗಳು ದಂಡ ವಿಧಿಸಿದ್ದು ದಂಡ ಪಾವತಿಸಲು ತಪ್ಪಿದಲ್ಲಿ 01 ತಿಂಗಳ ಸಾದಾ ಸೆರೆಮನೆ ವಾಸ ಶಿಕ್ಷೆ ವಿಧಿಸಿದೆ. ಕಲಂ: 504 ಕ್ಕೆ 5000/-ರೂ ಗಳು ವಿಧಿಸಿದ್ದು ದಂಡ ಪಾವತಿಸಲು ತಪ್ಪಿದಲ್ಲಿ 01 ತಿಂಗಳ ಸೆರೆಮನೆ ವಾಸ ಶಿಕ್ಷೆ ವಿಧಿಸಿದೆ. ದಂಡದ ಮೊತ್ತ 15 ಸಾವಿರವನ್ನು ಸಂತ್ರಸ್ತ ಮಹಿಳೆಗೆ ನೀಡುವಂತೆ ನ್ಯಾಯಾಲಯವು ತನ್ನ ತೀರ್ಪು ನೀಡಿತು.

ಪ್ರಧಾನ ಸಿವಿಲ್ ಜಡ್ಜ್ ಮತು ಜೆ.ಎಂ.ಎಫ್.ಸಿ. ನ್ಯಾಯಾಲಯ ವಿರಾಜಪೇಟೆ ಗೌ. ನ್ಯಾಯಾಧೀಶರಾದ ಶ್ರೀ ವಿಶ್ವನಾಥ್ ಅವರು ಪ್ರಕರಣದ ತೀರ್ಪು ನೀಡಿದ್ದು, ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ವಿರಾಜಪೇಟೆ ಸರ್ಕಾರಿ ಸಹಾಯಕಿ ಅಭಿಯೋಜಕರಾದ ಚೈತ್ರ ಅವರು ವಾದ ಮಂಡಿಸಿದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0