ವಿರಾಜಪೇಟೆ; ಏ.02ರಂದು ಶ್ರೀ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಹನುಮ ಜಯಂತಿ

Mar 27, 2026 - 14:43
 0  101
ವಿರಾಜಪೇಟೆ; ಏ.02ರಂದು ಶ್ರೀ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಹನುಮ ಜಯಂತಿ

ವಿರಾಜಪೇಟೆ; ಪ್ರಭು ಶ್ರೀ ರಾಮ ಭಕ್ತ ಹನುಮ ಜಯಂತಿ ಪ್ರತಿ ವರ್ಷ ಆಚರಿಸುವಂತೆ ಪ್ರಸ್ತುತ ವರ್ಷ ಸಕಲ ದೇವಾತ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ದೇಗುಲ ಸಮಿತಿ ತಿಳಿಸಿದೆ.

ವಿರಾಜಪೇಟೆ ನಗರದ ಚಿಕ್ಕಪೇಟೆ, ಛತ್ರಕೆರೆ ಸಮೀಪದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ ತಾ. 02-04-2026 ರ ಗುರುವಾರ ಶ್ರೀ ಹನುಮ ಜಯಂತಿ ಆಚರಣೆ ಮಾಡಲಾಗುವುದು. ಅಂದು ಬೆಳಿಗ್ಗೆ ಶ್ರೀ ದೇವನಿಗೆ ವಿಶೇಷ ಅಭಿಷೇಕ ಪೂಜೆ, ಭಜನೆ, ವಿಶೇಷ ಆಲಂಕಾರ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಾಹಾಪೂಜೆ ಮತ್ತು ಮಂಗಳಾರತಿ ನಡೆಯಲಿದೆ. ತದ ನಂತರ ದೇಗುಲ ಸಮಿತಿಯಿಂದ ಆಗಮಿಕ ಭಕ್ತ ರಿಗೆ ಅನ್ನಸಂತರ್ಪಣೆ ನಡೆಯಲಿದೆ.

,ಹನುಮ ಜಯಂತಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ನಾಡಿನ ಸರ್ವ ಭಕ್ತ ಮಹಾಶಯರು ಭಾಗಿಗಳಾಗಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ. 

ವರದಿ;ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0