ಶಾಸಕ ಎ‌ಎಸ್ ಪೊನ್ನಣ್ಣ ನೇತೃತ್ವದಲ್ಲಿ ಸಿ.ಎಂ ಭೇಟಿಯಾದ ಭಾಗಮಂಡಲ ಗೌಡ ಸಮಾಜ

ಶಾಸಕ ಎ‌ಎಸ್ ಪೊನ್ನಣ್ಣ ನೇತೃತ್ವದಲ್ಲಿ ಸಿ.ಎಂ ಭೇಟಿಯಾದ  ಭಾಗಮಂಡಲ ಗೌಡ ಸಮಾಜ

ಬೆಂಗಳೂರು:ಭಾಗಮಂಡಲ ಗೌಡ ಸಮಾಜ ಪ್ರಮುಖರಿಂದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ, ಇಂದು ಭಾಗಮಂಡಲ ನಾಡಗೌಡ ಸಮಾಜದ ಅಧ್ಯಕ್ಷರಾದ ಕುದ್ಪಾಜೆ ಪಿ ಪಳಂಗಪ್ಪರವರ ನಿಯೋಗ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ಹಲವು ಪ್ರಮುಖ ಬೇಡಿಕೆಗಳಿಗೆ ಮನವಿ ಸಲ್ಲಿಸಿದರು.

ಪ್ರಮುಖವಾಗಿ, ಭಾಗಮಂಡಲ ಗ್ರಾಮದಲ್ಲಿ 1983 ರಲ್ಲಿ ನಿರ್ಮಿಸಿರುವ ಗೌಡ ಸಮುದಾಯ ಭವನದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದ್ದು, ಭಾಗಮಂಡಲ ಭಾಗದಲ್ಲಿ ಏಕೈಕ ಸಮುದಾಯ ಭವನ ಇದಾಗಿದೆ. ಗೌಡ ಸಮಾಜ ಮತ್ತು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನವಾಗಿ ಸಮುದಾಯ ಭವನದ ನಿರ್ಮಿಸಲು ಅನುದಾನ ಮಂಜೂರು ಮಾಡಲು ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅನುದಾನ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದರು.ಈ ನಿಯೋಗದಲ್ಲಿ, ಗೌಡ ಸಮಾಜದ ಪ್ರಮುಖರಾದ ಹೊಸೂರು ಸತೀಶ್ ಜೋಯಪ್ಪ, ಪ್ರಕಾಶ್ ಕುದ್ಪಾಜೆ, ದೇವಂಗೋಡಿ ಹರ್ಷ, ಕುಯ್ಯಮುಡಿ ರಂಜು ನಿಡ್ಯಮಲೆ ರವಿ, ಕುದ್ಪಾಜೆ ಗಗನ್, ನಿಡ್ಯಮಲೆ ದಾಮೋದರ, ಅಮೆ ಹರೀಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.