ಗಂಧದ ಕೋಟಿ ವಲಯ ಉಪ ಅರಣ್ಯಾಧಿಕಾರಿ ಐಶ್ವರ್ಯ ಆರ್. ಅವರಿಗೆ ಮುಖ್ಯಮಂತ್ರಿ ಪದಕ

ಕುಶಾಲನಗರ : ಇಲ್ಲಿನ ಗಂಧದಕೋಟಿಯಲ್ಲಿರುವ ಅರಣ್ಯ ತರಬೇತಿ ಕೇಂದ್ರದ ಉಪ ವಲಯ ಅರಣ್ಯಾಧಿಕಾರಿ ಐಶ್ವರ್ಯ ಆರ್.ಗೌಡರ್ ಅವರು ಮುಖ್ಯ ಮಂತ್ರಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಇಲಾಖೆಯಲ್ಲಿ ಮಾಡಿರುವ ಸಕ್ರಿಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.120 ಉಪ ವಲಯ ಅರಣ್ಯಾಧಿಕಾರಿ ಹಾಗೂ 45 ಅರಣ್ಯ ವೀಕ್ಷಕರಿಗೆ ವೃತ್ತಿ ಬುನಾದಿ ತರಬೇತಿ ಯಲ್ಲಿ- ವನ್ಯಜೀವಿ ನಿರ್ವಹಣೆ, ಸಸ್ಯಶಾಸ್ತ್ರ, ಮಣ್ಣು ಶಾಸ್ತ್ರ, ಲೆಕ್ಕ ಪತ್ರ ನಿರ್ವಹಣೆ ಮೊದಲಾದ ವಿಷಯಗಳ ಕುರಿತು ಬೋಧನೆ ಮಾಡಿರುವುದು.100 ಕ್ಕೂ ಹೆಚ್ಚು ಬಗೆಯ ಸಸ್ಯ ಪ್ರಬೇಧ ಗುರುತಿಸುವ ಜ್ಞಾನ ಹೊಂದಿರುವುದು, ಪಕ್ಷಿ ಹಾಗೂ ಜೀವಿ ಸಂಕುಲದ ಬಗ್ಗೆ ಹೊಂದಿರುವ ಜ್ಞಾನವನ್ನು ಇಲಾಖೆ ಗುರುತಿಸಿ ಗೌರವಿಸುತ್ತಿದೆ.ಮಾನವ ವನ್ಯ ಜೀವಿ ಸಂಘರ್ಷ, ಜೇನುಕೃಷಿ, ವನ್ಯಜೀವಿ ಕಾನೂನು, ಇಕ್ಟ್ ವಿಷಯದ ಬಗ್ಗೆ ತರಬೇತಿ, ಚಿಣ್ಣರ ವನ ದರ್ಶನ ಕಾರ್ಯಕ್ರಮ ಪೊನ್ನಂಪೇಟೆ ವಲಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಾಲಾ ಕಾಲೇಜುಗಳ ಮಕ್ಕಳಿಗೆ ಮಾಡಿರುವ ಬೋಧನೆಯ ಸುಧೀರ್ಘ ಸೇವೆಗೆ ಐಶ್ವರ್ಯ ಗೌಡರ್ ಅವರಿಗೆ ಪ್ರಶಸ್ತಿ ಲಭಿಸಿದೆ. ಮೂಲತಃ ಬಾಗಲಕೋಟ ಜಿಲ್ಲೆಯ ಇಳಕಲ್ ವಾಸಿಯಾಗಿರುವ ಇವರು, ಕಳೆದ 8 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ಸಾಧನೆಗೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.