ಉಪ ವಲಯ ಅರಣ್ಯಾಧಿಕಾರಿ ಸಚಿನ್ ನಿಂಬಾಳ್ಕರ್ ಗೆ ಮುಖ್ಯ ಮಂತ್ರಿ ಪದಕ

ಕುಶಾಲನಗರ : ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮೀನುಕೊಲ್ಲಿ ವಿಭಾಗದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಚಿನ್ ನಿಂಬಾಳ್ಕರ್ ಅವರಿಗೆ ಮುಖ್ಯ ಮಂತ್ರಿ ಪದಕ ಲಭಿಸಿದೆ.
ಅರಣ್ಯ ಇಲಾಖೆಯಲ್ಲಿ 200 ಕ್ಕೂ ಹೆಚ್ಚು ಅರಣ್ಯ ಮೊಕದ್ದಮೆಗಳು, 30 ಕ್ಕೂ ಹೆಚ್ಚು ವನ್ಯಜೀವಿ ಪ್ರಕರಣಗಳು ಹಾಗೂ 50 ಕ್ಕೂ ಹೆಚ್ಚು ಉಚ್ಚ ನ್ಯಾಯಾಲಯದ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಿ ಅರಣ್ಯ ಕಾನೂನು ಬಗ್ಗೆ ತರಬೇತಿ ಶಾಲೆಯಲ್ಲಿ ಭೋಧನೆಯನ್ನು ಮಾಡಿರುತ್ತಾರೆ.
ಇವರು ಮೂಲತಃ ಬೆಳಗಾವಿ ಜಿಲ್ಲೆ, ಅಥಣಿ ಯವರಾಗಿದ್ದು ಕಳೆದ 8 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕಳೆದ ಕೆಲವು ವರ್ಷಗಳ ಕಾಲ ವಿರಾಜಪೇಟೆ ಉಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇದೀಗ ಕುಶಾಲನಗರದ ಮೀನುಕೊಲ್ಲಿ ವಲಯದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿಋವಹಿಸುತ್ತಿದ್ದಾರೆ.