ಚೋಕಂಡಳ್ಳಿ: ನಲ್ವತ್ತೋಕ್ಲು ಎಸ್‌ಕೆಎಸ್ಎಸ್ಎಫ್ ಯೂನಿಟ್ ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆ

ವಿರಾಜಪೇಟೆ:ಚೋಕಂಡಳ್ಳಿ,
ನಲ್ವತ್ತೋಕ್ಲು SKSSF ಯೂನಿಟ್ ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆಯನ್ನು ಯೂನಿಟ್ ಅಧ್ಯಕ್ಷ ರಶೀದ್ ದಾರಿಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಎಲ್ಲರೂ ಸಮಸ್ತ ಅಧೀನದಲ್ಲಿ ಕಾರ್ಯನಿರ್ವಹಿಸಬೇಕೆಂದು ಅಧ್ಯಕ್ಷರು ಕರೆ ನೀಡಿದರು.ಝಿಯಾಹುದ್ದೀನ್ ಬಾಖವಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.ಸಮಸ್ತ ಶತಮಾನೋತ್ಸವ ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕೆಂದು ಸಂಚಾಲಕ ಝೈನುದ್ಧೀನ್ ಮುಸ್ಲಿಯಾರ್ ಕರೆ ನೀಡಿದರು.ಸಮಸ್ತ 100ನೇ ವಾರ್ಷಿಕ ಸಮ್ಮೇಳನದ ಪ್ರಚಾರದ ಅಂಗವಾಗಿ, ಸಮಸ್ತ ಪ್ರಚಾರ ಕೀ ಪಂಚ್ ವಿತರಣೆ ಮಾಡಿದರು.ಸಭೆಯನ್ನು ಯೂನಿಟ್ ಕಾರ್ಯದರ್ಶಿ ನೌಷಾದ್ ದಾರಿಮಿ., ಸ್ವಾಗತಿಸಿ, ಸಹದ್ ಫೈಝಿ ವಂದಿಸಿದರು