ಕೊಡಗು ವಿಶ್ವವಿದ್ಯಾಲಯ MSW ವಿಭಾಗದಿಂದ ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮ

ಸೋಮವಾರಪೇಟೆ: ಕೊಡಗು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ (MSW) ವಿದ್ಯಾರ್ಥಿಗಳಿಂದ ಸೋಮವಾರಪೇಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಿಂದ ವಿದ್ಯಾರ್ಥಿಗಳ ಕ್ಷೇತ್ರ ಕಾರ್ಯದ ಭಾಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಯಶೋಧ ರವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ನಂತರ ಮಾತನಾಡಿದ ದಂತ ವೈದ್ಯಾಧಿಕಾರಿ ಡಾ. ಆಫ್ರಿನ್ ಮೆಲ್ವಿನ್ ಅವರು ವಿದ್ಯಾರ್ಥಿಗಳಿಗೆ ಹಲ್ಲುಗಳ ಶುದ್ಧತೆಯ ಅಗತ್ಯತೆ, ಆಹಾರ ಪದ್ದತಿಯ ಪರಿಣಾಮಗಳು ಮತ್ತು ಹಲ್ಲು ಸಂರಕ್ಷಣೆಯ ವಿಧಾನಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ರಾಧಾ, ದೈಹಿಕ ಶಿಕ್ಷಕ ನಾಗೇಶ್ ಹಾಗೂ ಇನ್ನಿತರ ಶಿಕ್ಷಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೈದ್ಯಾಧಿಕಾರಿಗಳ ಸಹಾಯಕರಾಗಿ ಚೇತನ್ ಮತ್ತು ಗಿರೀಶ್ ಅವರು ಉಪಸ್ಥಿತರಿದ್ದರು.150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ದಂತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ದಂತ ಆರೋಗ್ಯ ಕುರಿತು ಹೊಸ ಅರಿವು ಹೊಂದಿದರು. ಮಕ್ಕಳಿಗೆ ಉಚಿತ ದಂತ ತಪಾಸಣೆ ಒದಗಿಸಲಾಯಿತು.
ಈ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ MSW ವಿದ್ಯಾರ್ಥಿಗಳಾದ ಓಶಿನ್ ಗಾಡ್ವಿನ್, ಕಾವ್ಯ, ರವಿಕುಮಾರ್, ಮಂಜುನಾಥ್, ರತೇಶ್, ಸಾಗರ್ ಮತ್ತು ದರ್ಶನ್ ಅವರು ಪ್ರಮುಖ ಪಾತ್ರವಹಿಸಿದರು.ಸ್ವಾಗತವನ್ನು ರತೇಶ್ ನಿರ್ವಹಿಸಿದರೆ, ವಂದನೆಯನ್ನು ಸಾಗರ್ ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಕಾವ್ಯ ಪ್ರಭಾವಶೀಲವಾಗಿ ನಿರ್ವಹಿಸಿದರು.