ಹೆಬ್ಬಾಲೆ : ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ

ಹೆಬ್ಬಾಲೆ : ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ

ಕುಶಾಲನಗರ : ಬಾಲ್ಯದಿಂದಲೇ ಮಕ್ಕಳಿಗೆ‌ ಉತ್ತಮ ಮೌಲ್ಯ ಹಾಗೂ ಸಂಸ್ಕಾರಗಳನ್ನು ಕಲಿಸಲು‌ ಪೋಷಕರು ಒತ್ತು ನೀಡಬೇಕು ಎಂದು ನಿವೃತ್ತ ಮುಖ್ಯಶಿಕ್ಷಕಿ ಸೀತಾಲಕ್ಷ್ಮಿ ಹೇಳಿದರು.ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದೂ ಸಂಪ್ರದಾಯದಲ್ಲಿ ಅಕ್ಷರ ಅಭ್ಯಾಸ ತುಂಬ ಮಹತ್ವ ಪಡೆದುಕೊಂಡಿದೆ. ಶಾಲೆಗೆ ಮಕ್ಕಳನ್ನು ಸೇರಿದ‌ ನಂತರ ಪೋಷಕರ ಜವಾಬ್ದಾರಿ ಪ್ರಾರಂಭವಾಗುತ್ತದೆ.ಮಕ್ಕಳನ್ನು ಮನೆಯಲ್ಲಿಯೇ ತಯಾರು ಮಾಡಬೇಕು. ಮನೆಯೇ ಮೊದಲ ಪಾಠ ಶಾಲೆ,ತಾಯಿಯೇ ಮೊದಲ ಗುರು ಇದ್ದಂತೆ.ಆದ್ದರಿಂದ ಮಕ್ಕಳಿಗೆ ಉತ್ತಮ ಹವ್ಯಾಸ ,ಶಿಕ್ಷಣ ಕೊಡಿಸಿದರೆ‌ ಅವರೇ ಸಮಾಜದ ಆಸ್ತಿ ಯಾಗುತ್ತಾರೆ ಎಂದರು.ಶಾಲೆಗೆ ಸೇರಿದ‌ ನಂತರ ಶಿಕ್ಷಕರು ಎಲ್ಲಾ ಕಲಿಸುತ್ತಾರೆ ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು.ಆಧುನಿಕತೆಯ ಕರಿನೆರಳು ಮಕ್ಕಳ ಮೇಲೆ ಬಿಳದಂತೆ ಎಚ್ಚರಿಕೆ ವಹಿಸಬೇಕು.ಮೊಬೈಲ್ ಕೈಗೆ‌ಕೊಡಬೇಡಿ.ಈ ಬಗ್ಗೆತಾಯಂದಿರು ಎಚ್ಚರಿಕೆ ಯಿಂದ ಇರಬೇಕು.ಗ್ರಾಂಥಾಲಯದ ಪುಸ್ತಕ ಓದುವ ಹವ್ಯಾಸ ಬೆಳೆಸಿ.ಆದರ್ಶ ಗುಣ ರೂಢಿಸಿಕೊಳ್ಳಲು ಕಲಿಯುತ್ತಾರೆ.ದೇಶ ಪ್ರೇಮಿಗಳು.ಆದರ್ಶ ವ್ಯಕ್ತಿ,ಮಹಾನ್ ನಾಯಕರ ಜೀವನ ಚರಿತ್ರೆ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು‌ ಸಲಹೆ ನೀಡಿದರು.

ಅರ್ಚಕರಾದ ನಂಜುಂಡ ಆಚಾರ್ಯ, ರವಿಕಿರಣ್ ಅವರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.ಪೋಷಕ ಶಿಕ್ಷಕ ಪರಿಷತ್ತು ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ನಿವೃತ್ತ ಕೃಷಿ ಅಧಿಕಾರಿ ಶಿವಾನಂದ, ನಿವೃತ್ತ ಶಿಕ್ಷಕಿಆಶಾ ಕಣಿವೆ, ಹಾರಂಗಿ ನೀರಾವರಿ ಇಲಾಖೆ ಎಂಜಿನಿಯರ್ ವರಲಕ್ಷ್ಮಿ,ಶಾಲಾ ವ್ಯವಸ್ಥಾಪಕ ಎಚ್.ಎಸ್.ಲೋಕೇಶ್ ,ಮುಖ್ಯ ಶಿಕ್ಷಕಿ ಲೇಖಾ ಪಾಲ್ಗೊಂಡಿದ್ದರು.