ಇನ್ನರ್ ವೀಲ್ ಸಂಸ್ಥೆಯ 50 ನೇ ಅಧ್ಯಕ್ಷೆಯಾಗಿ ಲಲಿತಾರಾಘವನ್ ಪದಗ್ರಹಣ

ಇನ್ನರ್ ವೀಲ್ ಸಂಸ್ಥೆಯ  50 ನೇ  ಅಧ್ಯಕ್ಷೆಯಾಗಿ ಲಲಿತಾರಾಘವನ್ ಪದಗ್ರಹಣ

ಮಡಿಕೇರಿ: ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆಯ 50 ನೇ ವಷ೯ದ ಸಂದಭ೯, ನೂತನ ಅಧ್ಯಕ್ಷೆಯಾಗಿ ಲಲಿತಾರಾಘವನ್ ಮತ್ತು ಕಾಯ೯ದಶಿ೯ಯಾಗಿ ನಮಿತಾ ರೈ ಅಧಿಕಾರ ವಹಿಸಿಕೊಂಡಿದ್ದಾರೆ.ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಇನ್ನರ್ ವೀಲ್ ನಲ್ಲಿ ಸದಸ್ಯೆಯಾಗಿ 50 ವಷ೯ ಪೂರೈಸಿರುವ ಹಿರಿಯ ಸದಸ್ಯೆ ಡಾ.ಜಯಲಕ್ಷ್ಮಿ ಪಾಟ್ಕರ್ ನೂತನ ಆಡಳಿತ ಮಂಡಳಿಗೆ ಪದಗ್ರಹಣ ನೆರವೇರಿಸಿದರು.

 ಸಂದಭ೯ ಮಾತನಾಡಿದ ನೂತನ ಅಧ್ಯಕ್ಷೆ ಲಲಿತಾ ರಾಘವನ್, ಮಹಿಳೆಯರ ಸ್ವಾವಲಂಭನೆಗೆ ಪೂರಕವಾದ ಯೋಜನೆಗಳನ್ನು ಇನ್ನರ್ ವೀಲ್ ವತಿಯಿಂದ ಮುಂದಿನ ವಷ೯ದಲ್ಲಿ ಜಾರಿಗೊಳಿಸುವುದಾಗಿ ಭರವಸೆ ನೀಡಿದರಲ್ಲದೇ, ಅಥ೯ಪೂಣ೯ ಯೋಜನೆಗಳ ಮೂಲಕ ಸಮುದಾಯ ಸೇವೆಗೆ ಮುಂದಾದಾಗುವುದಾಗಿ ನುಡಿದರು.ಬೇರೆಯವರಿಗಾಗಿ ದಿನನಿತ್ಯ ಶ್ರಮಿಸುವ , ಬದುಕು ಸವೆಸುವ ಮಹಿಳೆಯರು ತನ್ನನ್ನು ತಾನು ಗಮನಿಸಿಕೊಳ್ಳುವ ದಿನಗಳು ಬಂದಿವೆ ಎಂದೂ ಲಲಿತಾ ರಾಘವನ್ ಹೇಳಿದರು.

ಕಾಯ೯ದಶಿ೯ ನಮಿತಾ ರೈ ವಂದಿಸಿದ ಕಾಯ೯ಕ್ರಮದಲ್ಲಿ ಇನ್ನರ್ ವೀಲ್ ಜಿಲ್ಲೆಯ ಮಾಜಿ ಅಧ್ಯಕ್ಷೆ ಪೂಣಿ೯ಮ ರವಿ , ನಿಕಟಪೂವ೯ ಅಧ್ಯಕ್ಷೆ ಅಗ್ನೇಸ್ ಮುತ್ತಣ್ಣ, ನಿಕಟಪೂವ೯ ಕಾಯ೯ದಶಿ೯ ರಶ್ಮಿ ಪ್ರವೀಣ್ ಹಾಜರಿದ್ದರು. ಶಫಾಲಿ ರೈ ಸಂಪಾದಕತ್ನದಲ್ಲಿ ಪ್ರಕಟವಾದ ಗಿರಿಶೖಂಗ ವಾತಾ೯ ಸಂಚಿಕೆಯನ್ನು ರೋಟರಿ ಮಡಿಕೇರಿಯ ಕಾಯ೯ದಶಿ೯ ಪ್ರಿನ್ಸ್ ಪೊನ್ನಣ್ಣ ಅನಾವರಣಗೊಳಿಸಿದರು. ರೇಣುಕಾ ಸುಧಾಕರ್, ಲಕ್ಷ್ಮಿ ಈಶ್ವರ ಭಟ್, ಲತಾ ಸುಬ್ಬಯ್ಯ ಪ್ರಾಥಿ೯ಸಿದರು. ಡಾ. ಶುಭಾ ರಾಜೇಶ್, ದಿವ್ಯ ಮುತ್ತಣ್ಣ, ಕಾಯ೯ಕ್ರಮ ನಿವ೯ಹಿಸಿದರು. ಕಾಯ೯ದಶಿ೯ ನಮಿತಾ ರೈ ವಂದಿಸಿದರು.