ರೆಡ್ ಕ್ರಾಸ್ ಕೊಡಗು ಘಟಕದ ಅಧ್ಯಕ್ಷರಾಗಿ ರವೀಂದ್ರರೈ ಪುನರಾಯ್ಕೆ

ಮಡಿಕೇರಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಘಟಕದ ಸಭಾಪತಿಯಾಗಿ ಬಿ.ಕೆ. ರವೀಂದ್ರ ರೈ ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.
ನಗರದ ರೆಡ್ ಕ್ರಾಸ್ ಭವನದಲ್ಲಿ ಜರುಗಿದ ವಾಷಿ೯ಕ ಮಹಾಸಭೆ ಸಂದಭ೯ ಮುಂದಿನ ಮೂರು ವಷ೯ಗಳ ಅವಧಿಗೆ ಆಡಳಿತ ಮಂಡಳಿಯ ಆಯ್ಕೆ ಜರುಗಿತು.
ಈ ಸಂದಭ೯ ಸಭಾಪತಿಯಾಗಿ ಬಿ.ಕೆ. ರವೀಂದ್ರರೈ, ಉಪಸಭಾಪತಿಯಾಗಿ ಅನಿಲ್ ಹೆಚ್.ಟಿ., ಕಾಯ೯ದಶಿ೯ಯಾಗಿ ಎಂ.ಧನಂಜಯ, ಖಜಾಂಚಿಯಾಗಿ ಪ್ರಸಾದ್ ಗೌಡ, ಸಹಕಾಯ೯ದಶಿ೯ಯಾಗಿ ಕೆ.ಮಧುಕರ್ ಆಯ್ಕೆಯಾಗಿದ್ದಾರೆ.
ರೆಡ್ ಕ್ರಾಸ್ ನಿದೇ೯ಶಕರಾಗಿ ಧೀಘ೯ಕೇಶಿ ಶಿವಣ್ಣ, ಡಾ. ಸಿ.ಆರ್. ಪ್ರಶಾಂತ್, ಹೆಚ್. ಆರ್. ಮುರಳೀಧರ್, ಪಿ.ಆರ್. ರಾಜೇಶ್, ಕೆ.ಎಂ.ವೆಂಕಟೇಶ್, ಬಿ.ಎನ್. ಪ್ರಕಾಶ್, ಎಸ್.ಸಿ. ಸತೀಶ್, ಜೊಸೇಫ್ ಸ್ಯಾಮ್, ಎ.ಕೆ.ಜೀವನ್, ಬಿ.ಕೆ. ಸತೀಶ್ ರೈ, ಬಿ.ಎನ್. ಧನಂಜಯ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, , ಶರತ್ ಕುಮಾರ್ ಶೆಟ್ಟಿ, ವಸಂತಕುಮಾರ್, ತೆನ್ನೀರಮೈನಾ, ಕೆ.ಸಿ.ವಸಂತ, ಕೆ.ಟಿ. ಉತ್ತಯ್ಯ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಧಾರವಾಡದಿಂದ ಆಗಮಿಸಿದ್ದ ಕನಾ೯ಟಕ ರಾಜ್ಯ ರೆಡ್ ಕ್ರಾಸ್ ನಿದೇ೯ಶಕ ಮಹಂತೇಶ್ ಕಾಯ೯ನಿವ೯ಹಿಸಿದ್ದರು.