ಧರ್ಮಗಳು ಬೇಕು, ಧರ್ಮಾಂಧತೆ ಬೇಡ, ಸೌಹಾರ್ದತೆ ಉಳಿಯಲಿ; ಹಾಫಿಝ್ ಸುಫಿಯಾನ್ ಸಖಾಫಿ

ಕುಶಾಲನಗರ:ಕೋಮುವಾದದ ವಿರುದ್ಧ ಎಸ್ಸೆಸ್ಸೆಫ್ ಕರ್ನಾಟಕ ಸಮಿತಿಯು ರಾಜ್ಯದ ಪ್ರಮುಖ 20 ಪಟ್ಟಣಗಳಲ್ಲಿ ಸೌಹಾರ್ದ ನಡಿಗೆ ನಡೆಸುತ್ತಿದ್ದು 19ನೇ ಕೇಂದ್ರದ ಕಾರ್ಯಕ್ರಮ ಕೊಡಗಿನ ಕುಶಾಲನಗರದಲ್ಲಿ ಜುಲೈ 3ರಂದು ನಡೆಯಿತು.ಎಸ್.ಎಸ್.ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ಖಮರುದ್ದೀನ್ ಅನ್ವಾರಿ ಸಖಾಫಿ ಅಧ್ಯಕ್ಷತೆಯಲ್ಲಿ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದರ ಪ್ರಾರ್ಥನೆಯೊಂದಿಗೆ ತಾವರೆಕೆರೆಯಿಂದ ಸೌಹಾರ್ದ ನಡಿಗೆ ಪ್ರಾರಂಭಗೊಂಡು ಪಟ್ಟಣದ ಕಾರು ನಿಲ್ದಾಣದನಲ್ಲಿ ಸಮಾಪ್ತಿಗೊಂಡಿತು. ಸಮಾರೋಪ ಸಮಾರಂಭದಲ್ಲಿ ಎಸ್.ಎಸ್.ಎಫ್ ರಾಜ್ಯಾಧ್ಯಕ್ಷರಾದ ಮೌಲಾನಾ ಹಾಫಿಝ್ ಸುಫಿಯಾನ್ ಸಖಾಫಿ ಸಂದೇಶ ಭಾಷಣ ಮಾಡಿದರು. ನಮ್ಮ ಭಾರತ ದೇಶವು ಹಲವು ಧರ್ಮಗಳ ಬೀಡಾಗಿದ್ದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದೆ. ಧರ್ಮಗಳಿಗೆ ಬೆಲೆ ಕೊಟ್ಟು ಧರ್ಮಾಂಧತೆಯನ್ನು ದೂರಗೊಳಿಸಲು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀ ಶ್ರೀ ಸದಾಶಿವ ಸ್ವಾಮಿಜಿ ಕಿರಿಕೊಡ್ಲಿ ಮಠ, ಕೊಡ್ಲಿಪೇಟೆ ಆಗಮಿಸಿ ಮನುಷ್ಯರು ವೈಜ್ಞಾನಿಕವಾಗಿ ಉನ್ನತಿಯತ್ತ ಸಂಚರಿಸುತ್ತಿದ್ದು, ಆದರೆ ಮನುಷ್ಯರಿಂದ ಮಾನವೀಯತೆ ಮರೀಚಿಕೆಯಾಗುವ ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ನ ಈ ಸೌಹಾರ್ದ ನಡಿಗೆ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಜೈ ಭೀಂ ಸಂಘದ ನಾಯಕರಾದ ದಾಮೋದರ್, ಜಿಲ್ಲಾ ಸಾಂಘಿಕ ನಾಯಕರಾದ ಸಯ್ಯಿದ್ ಮಹ್ದಿ ತಂಙಳ್ ಲಕ್ಷದ್ವೀಪ್, ಲತೀಫ್ ಸುಂಟಿಕೊಪ್ಪ, ಇಸ್ಮಾಯಿಲ್ ಸಖಾಫಿ, ಮುಹಮ್ಮದ್ ಹಾಜಿ, ಉಮರ್ ಸಖಾಫಿ, ಮುಸ್ತಫ ಸಖಾಫಿ, ಮುನೀರ್ ಮಹ್ಳರಿ, ಯಾಕೂಬ್ ಮಾಸ್ಟರ್, ಅಬ್ದುಲ್ಲಾ ಸಖಾಫಿ, ಮೊಯ್ದಿನ್ ಬಾಳುಗೋಡು, ಹುಸೈನ್ ಕುಶಾಲನಗರ, ಮುಜೀಬ್ ಕೊಂಡಂಗೇರಿ, ಹಂಝ ಮಾನಿ, ಅಬ್ದುಲ್ಲ ಮದನಿ, ಇರ್ಷಾದ್ ಹಾಜಿ, ಝುಬೈರ್ ಕೂಡಿಗೆ ಉಪಸ್ಥಿತರಿದ್ದರು. ಸೌಹಾರ್ದ ನಡಿಗೆ ಸಮಾರೋಪ ಕಾರ್ಯಕ್ರಮ ಜುಲೈ 4 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ನೆಲ್ಯಹುದಿಕೇರಿ ಸ್ವಾಗತಿಸಿ ಇಬ್ರಾಹಿಂ ಮಾಸ್ಟರ್ ವಂದಿಸಿದರು.