ಶನಿವಾರಸಂತೆ:ಗ್ರಾಮ ಆಡಳಿತಾಧಿಕಾರಿಗೆ ಸ್ವಾಗತ ಕೋರಿದ ನಿಡ್ತ ಗ್ರಾ.ಪಂ

ಶನಿವಾರಸಂತೆ:ಗ್ರಾಮ ಆಡಳಿತಾಧಿಕಾರಿಗೆ ಸ್ವಾಗತ ಕೋರಿದ ನಿಡ್ತ ಗ್ರಾ.ಪಂ

ಶನಿವಾರಸಂತೆ:-ಗ್ರಾಮ ಆಡಳಿತ ಅಧಿಕಾರಿಗಳು ಗ್ರಾ.ಪಂ.ಗೆ ಒಳಪಡುವ ವೃತ್ತದಲ್ಲಿ ಪ್ರತಿದಿನ ಕರ್ತವ್ಯನಿರ್ವಹಿಸುವಂತೆ ಸರಕಾರ ಆದೇಶ ನೀಡಿರುವ ಹಿನ್ನಲೆಯಲ್ಲಿ ನಿಡ್ತ ಗ್ರಾ.ಪಂ.ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿ ಅಬ್ದುಲ್ ರಜಾಕ್ ನಿಡ್ತ ಗ್ರಾ.ಪಂ.ಕಚೇರಿಯಲ್ಲಿ ಕರ್ತವ್ಯಕ್ಕೆ ಆಗಮಿಸಿದರು. ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷ ಕೆ.ಟಿ.ಅಶೋಕ್ ಹೂಗುಚ್ಚ ನೀಡಿ ಕಚೇರಿಗೆ ಬರ ಮಾಡಿಕೊಂಡರು.ಈ‌ ಸಂದರ್ಭದಲ್ಲಿ ಪಿಡಿಒ ಮಾನಸ ಗ್ರಾ.ಪಂ.ಸದಸ್ಯರಾದ ತೀರ್ಥಾನಂದ್, ತಸ್ಲಿಮ್, ಪುಟ್ಟಣ್ಣ, ವೆಂಕಟೇಶ್ ಗ್ರಾ.ಪಂ.ಸಿಬ್ಬಂದಿ ಹಾಜರಿದ್ದರು.