ಭೂ ಪರಿವರ್ತನೆ ಮಾಡಲು ಇರುವ ನಿಯಮವನ್ನು ಸರಳೀಕರಣಗೊಳಿಸಿ: ಅರ್ವತ್ತೋಕ್ಲು ಗ್ರಾ.ಪಂ ಮಾಜಿ ಸದಸ್ಯ ಫಿಲಿಪೋಸ್ ಮ್ಯಾಥ್ಯೂ ಆಗ್ರಹ

ಭೂ ಪರಿವರ್ತನೆ ಮಾಡಲು ಇರುವ ನಿಯಮವನ್ನು ಸರಳೀಕರಣಗೊಳಿಸಿ:  ಅರ್ವತ್ತೋಕ್ಲು ಗ್ರಾ.ಪಂ ಮಾಜಿ ಸದಸ್ಯ ಫಿಲಿಪೋಸ್ ಮ್ಯಾಥ್ಯೂ ಆಗ್ರಹ
ಫೋಟೋ:ಅರ್ವತ್ತೋಕ್ಲು ಗ್ರಾ.ಪಂ ಮಾಜಿ ಸದಸ್ಯ ಫಿಲಿಪೋಸ್ ಮ್ಯಾಥ್ಯೂ

ಮಡಿಕೇರಿ: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆಯಲ್ಲಿ ಭೂ ಪರಿರ್ತನೆ ಮಾಡಲು ಇರುವ ನಿಯಮವನ್ನು ಸರಳೀಕರಣಗೊಳಿಸಬೇಕು ಎಂದು ಅರ್ವತ್ತೋಕ್ಲು ಗ್ರಾ.ಪಂ ಮಾಜಿ ಸದಸ್ಯ ಫಿಲಿಪೋಸ್ ಮ್ಯಾಥ್ಯೂ ಆಗ್ರಹಿಸಿದ್ದಾರೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆಯ ಹೊಸ ನಿಯಮಾವಳಿಯಿಂದ ಗ್ರಾಮೀಣ ಪ್ರದೇಶದಲ್ಲಿ ಮನೆಕಟ್ಟಲು ಸಮಸ್ಯೆ ಉದ್ಬವವಾಗಿದೆ. ಅಲ್ಲದೇ ಅಧಿಕಾರಿಗಳು ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಗ್ರಾ.ಪಂಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ಹಿನ್ನೆಲೆ ಮನೆಕಟ್ಟಲು ಇರುವ ನಿಯಮವನ್ನು ಸರಳೀಕರಣಗೊಳಿಸಬೇಕು ಎಂದು ಆಗ್ರಹಿಸಿದರು.

ಯೋಜನೆಯ ನಿಯಮದ ಪ್ರಕಾರ ಮನೆ ಕಟ್ಟುವ ಮೊದಲು ರಸ್ತೆ ನಿರ್ಮಾಣಕ್ಕೆ ರಸ್ತೆ ನಿರ್ಮಾಣಕ್ಕೆ ಜಾಗ ಬಿಡಬೇಕು ಎಂದಿದೆ. ಆದರೆ, ನಗರ ಪ್ರದೇಶಗಳಲ್ಲಿ ಜಾಗಬಿಡುವಂತೆ ಗ್ರಾಮೀಣ ಭಾಗದಲ್ಲಿ ಜಾಗ ಬಿಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈಗಿನ ನಿಯಮ ಜನವಿರೋಧಿಯಾಗಿದೆ ಎಂದು ಆರೋಪಿಸಿದರು.