ನಾಳೆ ಎಲ್ಲೆಲ್ಲಿ ಕರೆಂಟ್ ಇರಲ್ಲ!

ಮಡಿಕೇರಿ:-ಮಡಿಕೇರಿ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್3 ಗದ್ದಿಗೆ ಫೀಡರ್‍ನಲ್ಲಿ ಜುಲೈ, 15 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಾಹಣಾ ಕಾಮಗಾರಿ ನಡೆಸಬೇಕಿರುವ ಹಿನ್ನೆಲೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ ಸಂಪಿಗೆ ಕಟ್ಟೆ, ಕನ್ನಂಡಬಾಣೆ, ಎ.ವಿ.ಶಾಲೆ, ಗದ್ದಿಗೆ, ಉಕ್ಕುಡ, ಅಜಾದ್‍ನಗರ, ತ್ಯಾಗರಾಜ ಕಾಲೋನಿ, ಅಬ್ಬಿಫಾಲ್ಸ್ ರಸ್ತೆ, ಭಗವತಿ ನಗರ, ಮಲ್ಲಿಕಾರ್ಜುನ ನಗರ, ರಾಣಿಪೇಟೆ, ಮಾರ್ಕೇಟ್ ರಸ್ತೆ, ಮಹದೇವ ಪೇಟೆ, ಕಾನ್ವೆಂಟ್ ಜಂಕ್ಷನ್, ಕೂರ್ಗ್ ಇಂಟರ್ ನ್ಯಾಷನಲ್, ಐಟಿಐ ಕಾಲೇಜು ಹಿಂಭಾಗ, ಕಾವೇರಿ ಲೇಔಟ್, ಟಿ.ಜಾನ್ ಲೇಔಟ್, ಅಬ್ದುಲ್ ಕಲಾಮ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.