ವಿರಾಜಪೇಟೆ: ಫೆಡರೇಶನ್ ಬ್ರ್ಯಾಂಡ್ ಅಕ್ಕಿಗೆ ಚಾಲನೆ

ವಿರಾಜಪೇಟೆ: ಫೆಡರೇಶನ್ ಬ್ರ್ಯಾಂಡ್ ಅಕ್ಕಿಗೆ ಚಾಲನೆ

ವಿರಾಜಪೇಟೆ:ಕೃಷಿಕರ ಬಾಳು ಹಸನಾಗುವ ರೀತಿಯಲ್ಲಿ ನಾಗರಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಅಕ್ಕಿ ದೊರಕುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳಿ (ನಿ) ವಿರಾಜಪೇಟೆ, ಫೆಡರೇಶನ್ ಸಂಸ್ಥೆಯು ತನ್ನ ಬ್ರ್ಯಾಂಡ್ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.

 ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳಿ (ನಿ) ವಿರಾಜಪೇಟೆ, ಫೆಡರೇಶನ್ ಸಂಸ್ಥೆಯು ನಗರದ ದಖ್ಖನಿ ಮೊಹಲ್ಲ ಸ್ಥಿತಗೊಂಡಿರುವ ಅಕ್ಕಿ ಗಿರಣಿಯಲ್ಲಿ "ಫೆಡರೇಶನ್ ಬ್ರ್ಯಾಂಡ್ ಅಕ್ಕಿ" ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಕ್ಕಿ ಗಿರಣಿಯಲ್ಲಿ ಪ್ರಥಮವಾಗಿ ಪೂಜೆ ಸಲ್ಲಿಸದ ಬಳಿಕ, ಬ್ರ್ಯಾಂಡ್ ಅಕ್ಕಿ 25 ಕೆ.ಜಿಯ ಚೀಲವನ್ನು ಗ್ರಾಹಕರಿಗೆ ಹಸ್ತಾಂತರ ಮಾಡುವ ಮೂಲಕ ಬಿಡುಗಡೆಗೊಳಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳಿ (ನಿ) ವಿರಾಜಪೇಟೆ, ಫೆಡರೇಶನ್ ನ ಅಧ್ಯಕ್ಷರಾದ ವಾಟೇರಿರ ಪಿ. ಬೋಪಣ್ಣ ಅವರು ಹಿರಿಯ ಸಹಕಾರಿಗಳು ರೈತರ ಬಾಳು ಹಸನಾನುವ ಸದುದ್ದೇಶದಿಂದ, ರೈತಾಪಿ ವರ್ಗಕ್ಕೆ ಕಡಿಮೆ ದರದಲ್ಲಿ ಕೃಷಿ ಉಪಕರಣಗಳು, ಯಂತ್ರಗಳು, ಗೊಬ್ಬರ ಮುಂದಾದ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ದೊರಕುವಂತೆ ಮಾಡಿದರು. ಫೆಡರೇಶನ್ ಸಂಸ್ಥೆಯು 1943 ರಲ್ಲಿ ಸ್ಥಾಪನೆಯಾಗಿದ್ದು, ಕೊಡಗಿನಲ್ಲಿ ತನ್ನ ವ್ಯಾಪಾರ ವೃದ್ಧಿಸಿಕೊಂಡು ಬೃಹತ್ ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರಾಯೋಗಿಕವಾಗಿ ಸಂಸ್ಥೆಯು ಹೊಂದಿರುವ ಸ್ಥಳದಲ್ಲಿ ಎಲೆಟ್ರೀಕ್ ಚಾರ್ಜರ್ ಪಾಯಿಂಟ್ ಸ್ಥಾಪನೆ ಮಾಡಲಾಗಿ ಗ್ರಾಹಕರಿಗೆ ತನ್ನ ಸೇವೆ ಒದಗಿಸುತ್ತಿದೆ. ಇದೀಗ ಕೊಡಗು ಜಿಲ್ಲೆಯಲ್ಲಿ ಬೆಳೆಯುವ ಭತ್ತವನ್ನು ಅಕ್ಕಿಗಿರಣಿಯಲ್ಲಿ ಅಕ್ಕಿಯಾಗಿಸಿ, ನಾಡಿನ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ವಿತರಿಸಲು ಮುಂದಾಗಿದೆ. ಪ್ರಯೋಗಿಕವಾಗಿ 10 ಕೆ.ಜಿ ಮತ್ತು 25 .ಕೆ.ಜಿ ತೂಕದ ಚೀಲದಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ.

 ರಾಜ್ಯ ಸರ್ಕಾರವು ನೀಡುತ್ತಿರುವ ಬೆಂಬಲ ಬೆಲೆಕ್ಕಿಂತ ಅಲ್ಪ ಮೊತ್ತ ಹೆಚ್ಚಿಸಿ ರೈತರಿಂದ ನೇರವಾಗಿ ಭತ್ತ ಖರೀದಿ ಮಾಡಲಾಗುತ್ತಿದೆ. ರೈತರಿಂದ ರೈತರಿಗೆ ಎನ್ನುವ ಧ್ಯೇಯೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೊಂದಿರುವ ಅಕ್ಕಿಗಿರಣಿಯಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿ ಮಾಡುವ ಕೇಂದ್ರ ಸ್ಥಾಪಿಸಿ. ಮಾರುಕಟ್ಟೆ ದರಕ್ಕಿಂತ ಉತ್ತಮ ಬೆಲೆ ನೀಡುವ ಕಾರ್ಯಕ್ಕೆ ಮುಂದಾಗುತ್ತೇವೆ. ಬ್ರ್ಯಾಂಡ್ ಅಕ್ಕಿಯು ನಮ್ಮ ಅಕ್ಕಿ ಗಿರಣಿಯಲ್ಲಿ ಮಾತ್ರ ದೊರಕುವುದರಿಂದ ಗ್ರಾಹಕರು ನೇರವಾಗಿ ಬಂದು ಅಕ್ಕಿ ಚೀಲ ಪಡೆದುಕೊಳ್ಳಬಹುದಾಗಿದೆ. ಗ್ರಾಹಕರಿ ಸಹಕರಿಸುವಂತೆ ಮನವಿ ಮಾಡಿದರು.

 ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳಿ (ನಿ) ವಿರಾಜಪೇಟೆ, ಫೆಡರೇಶನ್ ನ ಉಪಾಧಕ್ಷರಾದ ತಾತಂಡ ಎಂ.ಕಾವೇರಪ್ಪ, ನಿರ್ಧೇಶಕರಾದ ಕಂಜಿತಂಡ ಮಂದಣ್ಣ, ಕೊಕ್ಕಂಡ ಎ. ಬಿದ್ದಪ್ಪ, ಮುಲ್ಲೇಂಗಡ ಎಂ ಕುಟ್ಟಪ್ಪ, ಚೇನಂಡ ಗಿರೀಶ್ ಪೂಣಚ್ಚ, ಮಾಚಿಮಂಡ ಬಿ.ವಸಂತ, ಕುಂಬೇರ ಮನು ಕುಮಾರ್, ಮೂಕೊಂಡ ಪಿ.ಸುಬ್ರಮಣಿ, ಕೆ.ಆರ್. ವಿನೋದ್, ಅಂಜಪರವಂಡ ಎಂ. ಮಂದಣ್ಣ, ಕೂತಂಡ ಬಿ.ಸಚೀನ್ ಕುಟ್ಟಯ್ಯ, ಪುಲಿಯಂಡ ಎ. ಪೊನ್ನಣ್ಣ, ಕರ್ತಚ್ಚೀರ ಬಿ.ಲತಾ , ಪುಟ್ಟಿಚಂಡ ವೀಣಾ ಮಹೇಶ್, ಹೆಚ್.ಎನ್. ಶೇಖರ್ ಮತ್ತು ಹೆಚ್.ಎ. ಆನಂದ ಹಾಗೂ ವ್ಯವಸ್ಥಾಪಕರಾದ ಕೆ.ಎಂ, ಚಂದ್ರಕಾಂತ್ ಮುಖೇಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.