ವಿರಾಜಪೇಟೆ:ಪುರಸಭಾ ವ್ಯಾಪ್ತಿಯ ಸುಣ್ಣದಬೀದಿ ವಾರ್ಡಿಗೆ ಎ.ಎಸ್ ಪೊನ್ನಣ್ಣ ಭೇಟಿ, ಸಮಸ್ಯೆಗಳ ಬಗ್ಗೆ ಪರಿಶೀಲನೆ

ವಿರಾಜಪೇಟೆ:ಪುರಸಭಾ ವ್ಯಾಪ್ತಿಯ ಸುಣ್ಣದಬೀದಿ ವಾರ್ಡಿಗೆ ಎ.ಎಸ್ ಪೊನ್ನಣ್ಣ ಭೇಟಿ, ಸಮಸ್ಯೆಗಳ ಬಗ್ಗೆ ಪರಿಶೀಲನೆ

ವಿರಾಜಪೇಟೆ: ಪುರಸಭಾ ವ್ಯಾಪ್ತಿಯ ಸುಣ್ಣದಬೀದಿ ವಾರ್ಡಿಗೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಭೇಟಿ ನೀಡಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಪ್ರಮುಖವಾಗಿ ಸುಣ್ಣದ ಬೀದಿ ವಾರ್ಡ್ ನಲ್ಲಿರುವ ಸೇತುವೆಯ ಬದಿಯಲ್ಲಿ ಕುಸಿತ ಸಂಭವಿಸುವ ಸಾಧ್ಯತೆ ಇದ್ದು, ಇದಕ್ಕೆ ತಡೆಗೋಡೆ ನಿರ್ಮಿಸುವ ಕುರಿತು ಪರಿಶೀಲಿಸಿದರು. ವಾರ್ಡ್ ಸದಸ್ಯರು ಹಾಗೂ ಸ್ಥಳೀಯರೊಂದಿಗೆ ಮಾತನಾಡಿದ ಶಾಸಕರು, ಇದಕ್ಕೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ ಶಾಸಕರು, ಪುರಸಭೆಯ ದಿನಗೂಲಿ ನೌಕರರಿಗೆ ಈ ಭಾಗದಲ್ಲಿ ನೂತನವಾಗಿ ಕ್ವಾಟ್ರಸ್ ನಿರ್ಮಿಸುವ ಬಗ್ಗೆ ಪ್ರಗತಿಯಲ್ಲಿರುವುದಾಗಿ ಮಾಹಿತಿ ನೀಡಿದರು. ಜನರ ಅಹವಾಲುಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.

ಬಳಿಕ ತಾಲೂಕಿನ ಆಫೀಸ್ ಬಳಿ ಇರುವ ಗ್ರಂಥಾಲಯ ಕಟ್ಟಡವನ್ನು ಉನ್ನತೀಕರಿಸಲು ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿದರು. ನಂತರ ಇತ್ತೀಚೆಗೆ ಲೋಕೋಪಯೋಗಿ ಕಟ್ಟಡಕ್ಕೆ ಅಗ್ನಿ ಅವಘಡ ಸಂಭವಿಸಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಅಧ್ಯಕ್ಷೆ ಶ್ರೀಮತಿ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷರಾದ ಫಸಿಯಾ ತಬ್ಸುಂ, ಸ್ಥಳೀಯ ವಾರ್ಡ್ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಲೀಲ್,ಪುರಾಸಭೆಯ ಮುಖ್ಯಧಿಕಾರಿ ನಾಚಪ್ಪ, ಪುರಸಭೆ ಸದಸ್ಯರುಗಳಾದ ಮತೀನ್,ಶಾಹುಲ್ ಹಮಿದ್, ಪೃಥ್ವಿನಾಥ್,ಅತಿಫ್ ಮನ್ನ, ಯುವ ಕಾಂಗ್ರೆಸ್ ಪ್ರಮುಖರಾದ ಶಬೀರ್, ಪಕ್ಷದ ಪ್ರಮುಖರಾದ ಜೋಕಿಮ್,ಹರೀಶ್, ಮಂಜು ದೇವಯ್ಯ, ಮಂಜುನಾಥ್,ಅಯೂಬ್ ಹಾಗೂ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.