ಶುಕ್ರವಾರ ಮತ್ತು ಶನಿವಾರ ಕಾಡಾನೆ ಕಾರ್ಯಾಚರಣೆ!

ಶುಕ್ರವಾರ  ಮತ್ತು ಶನಿವಾರ ಕಾಡಾನೆ ಕಾರ್ಯಾಚರಣೆ!

ಸಿದ್ದಾಪುರ:ತಿತಿಮತಿ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಮೇಕೂರು ಹೊಕ್ಕೇರಿ, ಬಾಡಗ ಬಾಣಂಗಾಲ, ಮಾಲ್ದಾರೆ, ಚೆನ್ನಂಗಿ, ಚೆನ್ನಯ್ಯನಕೋಟೆ, ಕೊಡಗು ಶ್ರೀರಂಗಪಟ್ಟಣ ಗ್ರಾಮಗಳ ಖಾಸಗಿ ಜಮೀನುಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು 18.07.2025 ಮತ್ತು 19.07.2025 ರಂದು 06.30 ಗಂಟೆವರೆಗೆ ಪೂರ್ವಾಹ್ನ 09.00 ಗಂಟೆಯಿಂದ ಸಂಜೆ ಹಮ್ಮಿಕೊಳ್ಳಲಾಗಿರುತ್ತದೆ. ತೋಟದ ಮಾಲೀಕರು ಮತ್ತು ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಕಾರ್ಯಾಚರಣೆ ಸಮಯದಲ್ಲಿ ಸಾರ್ವಜನಿಕರು, ಗ್ರಾಮಸ್ಥರು, ಶಾಲಾ ಕಾಲೇಜು ಮಕ್ಕಳು, ಕಾರ್ಮಿಕರು ಹಾಗೂ ಬೆಳೆಗಾರರು ಎಚ್ಚರಿಕೆಯಿಂದ ಇದ್ದು ಕಾಡಾನೆ ಕಾರ್ಯಚರಣೆ ಸಮಯದಲ್ಲಿ ಪಟಾಕಿ ಸಿಡಿಸದೆ ಇಲಾಖೆಯೊಂದಿಗೆ ಸಹಕಾರ ನೀಡುವಂತೆ ವಲಯ ಅರಣ್ಯಾಧಿಕಾರಿ, ತಿತಿಮತಿ ವಲಯ ಇವರು ಪ್ರಕಟಣೆಯಲ್ಲಿ ಕೋರಿದ್ದಾರೆ.