ಎಸ್‌ಕೆಎಸ್.ಬಿ.ವಿ ಸಿದ್ದಾಪುರ ರೇಂಜ್ ಅಧ್ಯಕ್ಷರಾಗಿ ರಿಜ್ವಾನ್ ನೆಲ್ಲಿಹುದಿಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಅಫ್ರೀದ್ ನೆಲ್ಲಿಹುದಿಕೇರಿ ಅವಿರೋಧ ಆಯ್ಕೆ

ಸಿದ್ದಾಪುರ:ಎಸ್‌ಕೆಎಸ್.ಬಿವಿ ಸಿದ್ದಾಪುರ ರೇಂಜ್ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಇದರ ಅಧ್ಯಕ್ಷರಾಗಿ ರಿಜ್ವಾನ್ ನೆಲ್ಲಿಹುದಿಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಅಫ್ರೀದ್ ನೆಲ್ಲಿಹುದಿಕೇರಿ,ಖಜಾಂಜಿಯಾಗಿ ಸುಫಿಯಾನ್ ಸಿದ್ದಾಪುರ ಹಾಗೂ ಕಾರ್ಯಾಧ್ಯಕ್ಷರಾಗಿ ಮಿಸ್ಹನ್ ನಲ್ವತ್ತೇಕರೆ ಆಯ್ಕೆಯಾಗಿದ್ದಾರೆ.

ಸಿದ್ದಾಪುರದ ಮುನವ್ವಿರುಲ್ ಇಸ್ಲಾಂ ಮದರಸದಲ್ಲಿಣ ಸಿದ್ದಾಪುರ ಎಸ್.ಕೆ.ಎಸ್.ಬಿ.ವಿ ರೇಂಜ್ ಚೇರ್ಮನ್ ರಹೂಫ್ ಉದವಿ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಸಭೆಯಲ್ಲಿ ನಡೆಯಿತು.ಸಭೆಯ ಉದ್ಘಾಟನೆಯನ್ನು ಜಿಲ್ಲಾ ಕನ್ವೀನರ್ ಸಿದ್ದೀಕ್ ವಾಫಿ ನೆರವೇರಿಸಿದರು.

ಮಕ್ಕಳ ಭವಿಷ್ಯ ಹಾಗೂ ಸಮಸ್ತ ಎಸ್‌ಕೆಎಸ್.ಬಿ.ವಿ ನಡೆದು ಬಂದ ಹಾದಿಯ ಬಗ್ಗೆ, ವಿವರಿಸಿ ಮುಂದಿನ ದಿನಗಳಲ್ಲಿ ನಡೆಯಲಿರುವ ಸಮಸ್ತ 100ನೇ ವಾರ್ಷಿಕ ಸಮ್ಮೇಳನ ವಿಜಯಗೊಳಿಸಬೇಕೆಂದು ವಿದ್ಯಾರ್ಥಿಗಳಿಗೆ ಆರಿಫ್ ಫೈಝಿ ಕರೆ ನೀಡಿದರು.ಈ ಸಂದರ್ಭ ಬಷೀರ್ ಅಲ್ ಹಸನಿ ,ಉಸೈನ್ ಅಜ್ಹರಿ, ಜಬ್ಬಾರ್ ಫೈಝಿ,ಮನ್ಸೂರ್ ಅಲಿ ಹಸನಿ, ಅಝೀಝ್ ಬಾಖವಿ, ರಹ್ಮಾನ್ ಫಾಳಿಲಿ, ಅರ್ಷದ್ ದಾರಿಮಿ, ಅನೀಫಾ ಮುಸ್ಲಿಯಾರ್ ಸಹದ್ ಫೈಝಿ, ಇದ್ದರು.ರೇಂಜ್ ಕನ್ವೀನರ್ ಝೈನುದ್ದೀನ್ ಫೈಝಿ ಸ್ವಾಗತ ಕೋರಿದರು.