ಕಡಂಗ: ಮಾದಕ ವಸ್ತುಗಳ ವಿರುದ್ಧ ಅಭಿಯಾನ

ಕಡಂಗ: ಮಾದಕ ವಸ್ತುಗಳ ವಿರುದ್ಧ ಅಭಿಯಾನ
ಕಡಂಗ: ಮಾದಕ ವಸ್ತುಗಳ ವಿರುದ್ಧ ಅಭಿಯಾನ

ಕಡಂಗ:ಇಲ್ಲಿನ ಮನ್ಶಉಲ್ ಉಲೂಂ ಮದ್ರಸ ಕಡಂಗದಲ್ಲಿ ಮಾದಕ ವಸ್ತುಗಳ ವಿರುಧ್ದ ಅಭಿಯಾನವು ಸೋಮವಾರ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹ್ಯಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾದ ಕುಞ್ಞಬ್ದುಲ್ಲಾ ವಹಿಸಿದ್ದರು.ಮುಹ್ಯಿದ್ದೀನ್ ಜುಮಾ ಮಸೀದಿಯ ಖತೀಬ್ ರಫೀಖ್ ಲತೀಫಿ ಮಾತನಾಡಿ, ಮಾದಕ ವ್ಯಸನಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿದರು.ಸಂದೇಶ ಭಾಷಣ ಮಾಡಿದ,ಮನ್ಶಉಲ್ ಉಲೂಂ ಮದ್ರಸ ಪ್ರಾಂಶುಪಾಲರಾದ ಸುಹೈಬ್ ಫೈಝಿ ಮಾದಕ ವಸ್ತುಗಳ ಉಪಯೋಗದಿಂದ ವ್ಯಕ್ತಿ ತಾನು ನಾಶವಾಗುವುದಲ್ಲದೆ ಸಮಾಜವನ್ನು ನಾಶ ಮಾಡುವರು ಎಂದರು.ನಂತರ ಲಹರಿ ವಿರುದ್ಧ ಅಭಿಯಾನ ಪ್ರತಿಜ್ಞೆ ಸ್ವೀಕರಿಸಲಾಯಿತು. ಮುಖ್ಯಮಂತ್ರಿಗಳಿಗೆ ಕಳುಹಿಸಲು ಎಲ್ಲಾ ವಿದ್ಯಾರ್ಥಿಗಳ ಸಹಿ ಸಂಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ ಎಂ.ಜೆ.ಎಂ ಉಪಾಧ್ಯಕ್ಷರಾದ ಸಲಾಂ ಸಿ.ಎ,ಸದಸ್ಯರುಗಳಾದ ರಝಾಕ್,ಸಿದ್ದೀಖ್ ಎಂ.ಯು.ಎಂ ಅಧ್ಯಾಪಕರುಗಳಾದ ಹನೀಫ್ ಮುಸ್ಲಿಯಾರ್,ಮುಹಮ್ಮದ್ ಮುಸ್ಲಿಯಾರ್,ಅಹ್ಮದ್ ಮೌಲವಿ ಹಾಜರಿದ್ದರು.

ವರದಿ:ನೌಫಲ್ ಕಡಂಗ